ಆಯುರ್ವೇದದಲ್ಲಿ ತುಳಸಿಗೆ ಅದರದ್ದೇ ಆದ ಮಹತ್ವವಿದೆ. ತುಳಸಿ ಎಲೆಯನ್ನು ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ನಿಮ್ಮ ಹಿತ್ತಲಲ್ಲೇ ಸಿಗುವ ತುಳಸಿಯನ್ನು ಪ್ರತಿನಿತ್ಯ ಒಂದು ಎಲೆ ಸೇವಿಸಿದರೆ ಸಾಕಷ್ಟು ಪ್ರಯೋಜನಗಳಿವೆ.
Photo Credit: Social Media
ಮಳೆಗಾಲದಲ್ಲಿ ಕಂಡುಬರುವ ಶೀತ, ಗಂಟಲು ನೋವು ತಡೆಯಲು ತುಳಸಿ ಎಲೆ ಜಗಿಯಿರಿ
ಅಸ್ತಮಾದಂತಹ ಉಸಿರಾಟದ ತೊಂದರೆ ಇರುವವರು ಪ್ರತಿನಿತ್ಯ ತುಳಸಿ ಎಲೆ ಜಗಿದರೆ ಉತ್ತಮ
ತುಳಸಿ ಎಲೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ
ತುಳಸಿ ಎಲೆಯನ್ನು ಸೇವಿಸುವುದು ರಕ್ತದೊತ್ತಡ ಸಮಸ್ಯೆ ಇರುವವರಿಗೆ ಉತ್ತಮ
ತುಳಸಿಯಲ್ಲಿ ಕ್ಯಾನ್ಸರ್ ವಿರೋಧಿ ಅಂಶವಿದ್ದು ಪ್ರತಿನಿತ್ಯ ಎಲೆ ಸೇವಿಸುವುದು ಉತ್ತಮ
ಮಧುಮೇಹಿಗಳು ತುಳಸಿ ಎಲೆಯ ರಸವನ್ನು ಪ್ರತಿನಿತ್ಯ ಸೇವಿಸಿದರೆ ಮಧುಮೇಹ ನಿಯಂತ್ರದಲ್ಲಿರುತ್ತದೆ
ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳನ್ನು ಬಾರದಂತೆ ತಡೆಗಟ್ಟಲು ತುಳಸಿ ಎಲೆ ಪರಿಣಾಮಕಾರಿ