ಕೇಕ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಮಕ್ಕಳು ಹನಿ ಕೇಕ್ ಎಂದರೆ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ಮನೆಯಲ್ಲಿಯೇ ಮೊಟ್ಟೆ ಹಾಕದೇ ಹನಿ ಕೇಕ್ ತಯಾರಿಸುವುದು ಹೇಗೆ ಎಂದು ಇಲ್ಲಿ ನೋಡಿ.
Photo Credit: Social Media
ಒಂದು ಜರಡಿಯಲ್ಲಿ ಒಂದೂ ಕಾಲು ಕಪ್ ಆಗುವಷ್ಟು ಗೋಧಿ ಹಿಟ್ಟು ತೆಗೆದುಕೊಳ್ಳಿ
ಕೇಕ್ ಮೃದುವಾಗಲು ಈ ಗೋಧಿ ಹಿಟ್ಟಿಗೆ ಸ್ವಲ್ಪ ಅಡುಗೆ ಸೋಡಾ, ಉಪ್ಪು ಹಾಕಬೇಕು
ಒಂದು ಕಪ್ ತಣ್ಣನೆಯ ನೀರು ಹಾಕಿ ಆ ಬಟ್ಟಲಿಗೆ ಅರ್ಧಕಪ್ ಸಕ್ಕರೆ ಸೇರಿಸಿ ಕರಗಿಸಿ
ಇದಕ್ಕೆ ಘಮ ಕೊಡಲು ಸ್ವಲ್ಪ ವೆನಿಲಾ ಎಸೆನ್ಸ್ ನ್ನು ಸೇರಿಸಿಕೊಳ್ಳಿ ಮತ್ತು ನಂತರ ವಿನೇಗರ್ ಹಾಕಿ
ಈ ಮಿಶ್ರಣಕ್ಕೆ ಸ್ವಲ್ಪ ಸನ್ ಫ್ಲವರ್ ಆಯಿಲ್ ಅಥವಾ ಆಲಿವ್ ಆಯಿಲ್ ಹಾಕಿ ಮಿಶ್ರಣ ಮಾಡಿ
ಈ ಮಿಶ್ರಣಕ್ಕೆ ಗೋಧಿಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಕಿ ಬಳಿಕ ಎಣ್ಣೆ ಹಚ್ಚಿರುವ ಅಗಲ ಪಾತ್ರೆಗೆ ಸುರಿಯಿರಿ
ಇದನ್ನು ಓವನ್ ನಲ್ಲಿ ಬೇಯಿಸಿ ತಣ್ಣಗಾದ ಬಳಿಕ ಅದರ ಮೇಲ್ಭಾಗಕ್ಕೆ ಜೇನು, ರೋಸ್ ವಾಟರ್ ಮಿಕ್ಸ್ ಮಾಡಿ ಸುರಿಯಿರಿ