ನೈಸರ್ಗಿಕ ಉತ್ಪನ್ನಗಳನ್ನು ಬಳಸಿ ಮುಖದ ಸೌಂದರ್ಯ ಹೆಚ್ಚಿಸಿ

ಪ್ರತಿಯೊಬ್ಬ ವ್ಯಕ್ತಿಗೂ ಚರ್ಮ ಹಾಗೂ ಮುಖದ ಸೌಂದರ್ಯವು ಅತ್ಯಂತ ಪ್ರಮುಖವಾದ ಸಂಗತಿ. ಸೌಂದರ್ಯವು ಸುಂದರವಾಗಿದೆ ಎಂದಾಗ ವ್ಯಕ್ತಿಯಲ್ಲಿ ತೃಪ್ತಿ ಹಾಗೂ ಆತ್ಮವಿಶ್ವಾಸದ ಮಟ್ಟಹೆಚ್ಚುವುದು. ವ್ಯಕ್ತಿಯಲ್ಲಿರುವ ಉತ್ತಮ ಆತ್ಮವಿಶ್ವಾಸವು ಎಲ್ಲಾ ಕೆಲಸ-ಕಾರ್ಯಗಳಲ್ಲೂ ಉತ್ಸಾಹ ಹಾಗೂ ಚೈತನ್ಯವನ್ನು ನೀಡುವುದು. ಹಾಗಾಗಿ ನಾವು ನಮ್ಮ ಆರೋಗ್ಯದ ಆರೈಕೆಯಂತೆ ತ್ವಚೆಯ ಆರೋಗ್ಯದ ಬಗ್ಗೆಯೂ ಸಾಕಷ್ಟು ಕಾಳಜಿ ವಹಿಸಬೇಕು. ಆಗ ಚರ್ಮವು ಉತ್ತಮ ಗುಣಮಟ್ಟ ಮತ್ತು ಆರೋಗ್ಯದಿಂದ ಕೂಡಿರುತ್ತದೆ. ಚರ್ಮದ ಆರೈಕೆಗೆ ಸಾಕಷ್ಟು ನೈಸರ್ಗಿಕ ಉತ್ಪನ್ನಗಳು ದೊರೆಯುತ್ತವೆ. ಅವುಗಳಲ್ಲಿ ಹಾಲು ಸಹ ಒಂದು.

photo credit social media

ಹಾಲು ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ಬಿ ಅನ್ನು ಅದ್ಭುತ ಪ್ರಮಾಣದಲ್ಲಿ ಪಡೆದುಕೊಂಡಿದೆ. ಇದರೊಂದಿಗೆ ಕೆಲವು ನೈಸರ್ಗಿಕ ಉತ್ಪನ್ನಗಳನ್ನು ಬೆರೆಸಿ ಫೇಸ್‌ಪ್ಯಾಕ್ ಅನ್ವಯಸಿದರೆ ಅದರ ಶಕ್ತಿಯು ದ್ವಿಗುಣವಾಗುವುದು. ಚರ್ಮದ ಚಿಕಿತ್ಸೆಯು ಅದ್ಭುತವಾಗಿ ನಡೆಯುವುದು. ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗದೆ ಪುನಃಶ್ಚೇತನ ಪಡೆದುಕೊಳ್ಳುವುದು. ಅಲ್ಲದೆ ನಿತ್ಯ ಉಂಟಾಗುವ ಹಾನಿಗಳನ್ನು ಬಲು ಸುಲಭವಾಗಿ ನಿವಾರಿಸುವುದರ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡುವುದು.

ಸೇಬು ವಿಟಮಿನ್ ಸಿ ಅನ್ನು ಹೊಂದಿದೆ. ಇದು ಚರ್ಮವನ್ನು ಶುದ್ಧೀಕರಿಸಲು, ಚರ್ಮದ ಬಣ್ಣವನ್ನು ವೃದ್ಧಿಸಲು ಹಾಗೂ ಆಳವಾದ ಪೋಷಣೆ ನೀಡಲು ಸಹಾಯ ಮಾಡುತ್ತದೆ.

ಬೆಣ್ಣೆ ಹಣ್ಣು ತ್ವಚೆಗೆ ಆಳವಾದ ಸ್ವಚ್ಛತೆಯನ್ನು ನೀಡುವುದು. ಜೊತೆಗೆ ಮೊಡವೆಗಳನ್ನು ನಿವಾರಿಸುತ್ತದೆ. ಇದನ್ನು ಹಾಲಿನ ಜೊತೆಗೆ ಬೆರೆಸಿದಾಗ ಅದ್ಭುತವಾದ ಮುಖವಾಡವಾಗುವುದು.

ಮೊಟ್ಟೆಯ ಹಳದಿ ಭಾಗವು ಚರ್ಮವನ್ನು ಬಿಗಿಗೊಳಿಸಿ, ಸುಕ್ಕುಗಳನ್ನು ನಿವಾರಿಸುತ್ತದೆ. ಹಾಲು ಮತ್ತು ಮೊಟ್ಟೆಯ ಮಿಶ್ರಣವು ಚರ್ಮಕ್ಕೆ ಆಳವಾದ ಪೋಷಣೆ ಹಾಗೂ ತೇವಾಂಶದಿಂದ ಕೂಡಿರುವಂತೆ ಮಾಡುವುದು.

ಚಾಕಲೇಟ್ ಪುಡಿಯು ಉತ್ಕರ್ಷಣ ನಿರೋಧಕ ಶಕ್ತಿಯನ್ನು ಪಡೆದುಕೊಂಡಿದೆ. ಅದು ನಿಮಗೆ ಚರ್ಮವನ್ನು ಮೃದುವಾಗಿಸಿ, ಕಾಂತಿಯಿಂದ ಕೂಡಿರುವಂತೆ ಮಾಡುವುದು.

ತ್ವಚೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗದೆ ಪುನಃಶ್ಚೇತನ ಪಡೆದುಕೊಳ್ಳುವುದು. ಅಲ್ಲದೆ ನಿತ್ಯ ಉಂಟಾಗುವ ಹಾನಿಗಳನ್ನು ಬಲು ಸುಲಭವಾಗಿ ನಿವಾರಿಸುವುದರ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡುವುದು.

ತ್ವಚೆಯ ಆರೋಗ್ಯದ ಬಗ್ಗೆಯೂ ಸಾಕಷ್ಟು ಕಾಳಜಿ ವಹಿಸಬೇಕು. ಆಗ ಚರ್ಮವು ಉತ್ತಮ ಗುಣಮಟ್ಟ ಮತ್ತು ಆರೋಗ್ಯದಿಂದ ಕೂಡಿರುತ್ತದೆ. ಚರ್ಮದ ಆರೈಕೆಗೆ ಸಾಕಷ್ಟು ನೈಸರ್ಗಿಕ ಉತ್ಪನ್ನಗಳು ದೊರೆಯುತ್ತವೆ. ಅವುಗಳಲ್ಲಿ ಹಾಲು ಸಹ ಒಂದು.