ಬಾದಾಮಿಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಕೆಲವು ಅಡ್ಡಪರಿಣಾಮಗಳನ್ನು ಪಡೆಯುತ್ತೀರಿ. ಜೊತೆಗೆ ದೇಹದ ತೂಕವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹಾಗಾದರೆ ಒಂದು ದಿನಕ್ಕೆ ಎಷ್ಟು ಬಾದಾಮಿ ಸೇವನೆ ಮಾಡಬೇಕು? ಬಾದಾಮಿಯ ಅತಿಯಾದ ಸೇವನೆಯಿಂದ ಆಗುವ ತೊಂದರೆಗಳೇನು?
photo credit social media
ಬಾದಾಮಿಗಳು ಆರೋಗ್ಯ, ಚರ್ಮಕ್ಕೆ ಚಮತ್ಕಾರವನ್ನೇ ಮಾಡುತ್ತದೆ. ಇದರಲ್ಲಿ ವಿಟಮಿನ್ ಇ ಮತ್ತು ಫೈಬರ್ ಯಥೇಚ್ಚವಾಗಿದೆ. ದಿನಕ್ಕೆ ಕೆಲವು ಬಾದಾಮಿಗಳು ದೇಹಕ್ಕೆ ಪ್ರಯೋಜನಕಾರಿಯಾಗಿದ್ದರೆ, ಹೆಚ್ಚಿನ ಸೇವನೆಯಿಂದ ಅಡ್ಡಪರಿಣಾಮಗಳನ್ನು ಪಡೆಯಬಹುದು.
ನಿಮಗೆ ಈಗಾಗಲೇ ತಿಳಿದಿದೆ, ಯಾವುದೇ ಆಹಾರವನ್ನು ಅತಿಯಾಗಿ ತಿನ್ನಬಾರದು, ಅದು ತುಂಬಾ ಹಾನಿಕಾರಕವೆಂದು. ಹಾಗೆಯೇ ಬಾದಾಮಿಗಳನ್ನು ಕೂಡ ಹೆಚ್ಚಾಗಿ ಸೇವನೆ ಮಾಡುವಂತಿಲ್ಲ.
ಪೌಷ್ಟಿಕಾಂಶ-ಭರಿತ ಆಹಾರಗಳನ್ನು ಅತಿಯಾಗಿ ತಿನ್ನುವುದು ಜೀರ್ಣಕಾರಿ ಅಸ್ವಸ್ಥತೆಗೆ ಕಾರಣವಾಗಬಹುದು ಮತ್ತು ಪೌಷ್ಟಿಕಾಂಶದ ಅಸಮತೋಲನಕ್ಕೆ ಕಾರಣವಾಗಬಹುದು ಎಂಬುದನ್ನು ತಿಳಿಯಿರಿ. ಹಾಗಾದರೆ ಬಾದಾಮಿ ಸೇವನೆ ಹೆಚ್ಚಾದರೆ ಏನೆಲ್ಲಾ ಅಡ್ಡಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.
ಬಾದಾಮಿಗಳಲ್ಲಿ ವಿಟಮಿನ್ ಇ ಶ್ರೀಮಂತವಾಗಿದೆ ಎಂಬುದು ನಿಮಗೆ ಗೊತ್ತು. ವಿಟಮಿನ್ ಇ ಕೊಬ್ಬು-ಕರಗಬಲ್ಲ ವಿಟಮಿನ್ ಆಗಿದ್ದು ಅದು ನಿಮ್ಮ ಚರ್ಮ, ಕಣ್ಣುಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಲು ಬಹಳ ಮುಖ್ಯವಾಗಿದೆ. ಇದನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸುವುದು ಒಳ್ಳೆಯದು.
ಒಂದು ವೇಳೆ ನೀವು ಮಿತಿಮೀರಿ ಬಾದಾಮಿ ಸೇವನೆ ಮಾಡಿದರೆ ಅದು ವಿಷವಾಗಿ ಪರಿವರ್ತನೆಯಾಗಿ, ಹೊಟ್ಟೆ ಸೆಳೆತ, ಅತಿಸಾರ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಂತಹ ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು. ವಿಟಮಿನ್ ಇ ರಕ್ತ ಹೆಪ್ಪುಗಟ್ಟುವಿಕೆಗೆ ಅಡ್ಡಿಯಾಗುವುದರಿಂದ ಇದು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು. ಅದಲ್ಲದೆ, ಸೋಂಕುಗಳನ್ನು ಉಲ್ಬಣಗೊಳಿಸುತ್ತದೆ.
ತೂಕ ಕಳೆದುಕೊಳ್ಳಲು ಜನರು ಬಾದಾಮಿ ಜೀಜಗಳನ್ನು ತಮ್ಮ ಆಹಾರಗಳಲ್ಲಿ ಸೇರಿಸುತ್ತಾರೆ. ಹಾಗೆಯೇ, ನೀವು ಹೆಚ್ಚೆಚ್ಚು ಬಾದಾಮಿಯನ್ನು ಸೇವನೆ ಮಾಡುವುದರಿಂದ ನಿಮ್ಮ ತೂಕ ಗಣನೀಯವಾಗಿ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಿರಿ.
ಬಾದಾಮಿಗಳು ಸಾಕಷ್ಟು ಕ್ಯಾಲೊರಿಗಳನ್ನು ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ. ನಿಮ್ಮ ದೇಹವು ಹೆಚ್ಚುವರಿ ಕ್ಯಾಲೊರಿಗಳನ್ನು ಕೊಬ್ಬಿನಂತೆ ಸಂಗ್ರಹಿಸುತ್ತದೆ. ಇದರಿಂದ ಸಹಜವಾಗಿಯೇ ನಿಮ್ಮ ತೂಕ ಹೆಚ್ಚಾಗುತ್ತದೆ.