ಯಾವುದೇ ಕಾರಣಗಳಿಗೆ ತಲೆಸುತ್ತು ಬಂದಾಗ ಒಬ್ಬ ವ್ಯಕ್ತಿ ಕೆಳಗೆ ಬೀಳುವ ಹಂತಕ್ಕೆ ಬಂದಾಗ ಏನು ಮಾಡಬೇಕೆಂದು ಅರೆಕ್ಷಣ ದಿಕ್ಕು ತೋಚದಂತಾಗುತ್ತದೆ. ಒಬ್ಬ ವ್ಯಕ್ತಿಗೆ ತಲೆಸುತ್ತು ಬಂದಾಗ ನಾವು ಮಾಡಬಹುದಾದ ಸಿಂಪಲ್ ಪ್ರಥಮ ಚಿಕಿತ್ಸೆ ಇಲ್ಲಿದೆ.
credit: social media
ದೇಹ ಬಳಲಿಕೆಗೊಳಗಾದಾಗ ಅಥವಾ ಅನಾರೋಗ್ಯದ ಕಾರಣದಿಂದ ತಲೆಸುತ್ತು ಬರುವ ಸಾಧ್ಯತತೆಯಿರುತ್ತದೆ
ಕಣ್ಣು ಮಂಜಾಗುವುದು, ಹೃದಯ ಬಡಿತ ಕ್ಷೀಣವಾಗುವುದು, ಉಸಿರಾಡಲು ಕಷ್ಟವಾಗುವುದು ಇದರ ಲಕ್ಷಣಗಳಾಗಿವೆ.
ತಲೆಸುತ್ತು ಬಂದ ವ್ಯಕ್ತಿಯನ್ನು ಚಪ್ಪಟೆ ನೆಲದ ಮೇಲೆ ಮೊದಲು ಅಂಗಾತ ಮಲಗಿಸಿ
ಬಿಗಿಯಾದ ಬಟ್ಟೆ ಧರಿಸಿದ್ದರೆ ಕೊಂಚ ಸಡಿಲಿಸಿ, ಕಾಲುಗಳನ್ನು ಚಾಚಿ ರಕ್ತಪೂರೈಕೆ ಸರಿಯಾಗಲು ಸಹಾಯ ಮಾಡಿ
ತಲೆಸುತ್ತು ಬಂದು ಜ್ಞಾನವೇ ಇಲ್ಲದಿದ್ದಾಗ ವ್ಯಕ್ತಿಯ ಕೆನ್ನೆ ತಟ್ಟಿ ಎಚ್ಚರಗೊಳಿಸಲು ಪ್ರಯತ್ನಿಸಿ
ಒಂದು ವೇಳೆ ತಲೆಸುತ್ತಿನ ಜೊತೆಗೆ ವಾಂತಿಯಾಗುತ್ತಿದ್ದರೆ ವ್ಯಕ್ತಿಯನ್ನು ಒಂದು ಬದಿಗೆ ಓರೆಯಾಗಿ ಮಲಗಿಸಿ
ಒಂದು ವೇಳೆ ಆತ ಬೇಗನೇ ಎಚ್ಚರಗೊಳ್ಳದೇ ಇದ್ದರೆ ತಡಮಾಡದೇ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ