ಚಳಿಗಾಲದಲ್ಲಿ ಮಲಗುವ ಮುನ್ನ ಮಾಡಲೇಬೇಕಾದ ಐದು ಕೆಲಸಗಳು

ಚಳಿಗಾಲದ ಬಂತೆಂದರೆ ದೇಹ ಬೆಚ್ಚಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಚಳಿಗಾಲದಲ್ಲಿ ಈ ಐದು ಕೆಲಸಗಳನ್ನು ಮಾಡಲೇಬೇಕು.

Photo Credit: Instagram, WD

ಚಳಿಗಾಲದಲ್ಲಿ ರಾತ್ರಿ ವೇಳೆ ದೇಹ ಬೆಚ್ಚಗಿಟ್ಟುಕೊಳ್ಳದೇ ಹೋದರೆ ಅನಾರೋಗ್ಯ ಖಂಡಿತಾ

ಶೀತ, ಕೆಮ್ಮು, ಅಸ್ತಮಾದಂತಹ ಅಲರ್ಜಿ ಸಮಸ್ಯೆಗಳು ಚಳಿಗಾಲದಲ್ಲಿ ಹೆಚ್ಚಾಗಿರುತ್ತದೆ

ಹೀಗಾಗಿ ರಾತ್ರಿ ಮಲಗುವ ಮುನ್ನ ಕಿವಿ ಮುಚ್ಚುವಂತಹ ಟೋಪಿ ಧರಿಸುವುದು ಮುಖ್ಯ

ಚಳಿಗಾಲದಲ್ಲಿ ಕಾಲು ಕೂಡಾ ಬೆಚ್ಚಗಿರಿಸಲು ತಪ್ಪದೇ ಸಾಕ್ಸ್ ಧರಿಸಿ

ರಾತ್ರಿ ಮಲಗುವ ಮುನ್ನ ಬಿಸಿ ನೀರು ಸೇವನೆ ಮಾಡಿ ಮಲಗಿದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ

ರಾತ್ರಿ ಮಲಗುವ ಮುನ್ನ ಒಂದು ಚೂರು ಶುಂಠಿ, ಕಾಳುಮೆಣಸು ಜಗಿದು ಮಲಗಿ

ಚಳಿಗಾಲದಲ್ಲಿ ಚರ್ಮ ಸುಕ್ಕುಗಟ್ಟದೇ ಇರಲು ರಾತ್ರಿ ಮಲಗುವ ಮುನ್ನ ಮಾಯಿಶ್ಚರೈಸ್ ಕ್ರೀಂ ಹಚ್ಚಿ