ಈ ಆಹಾರ ವಸ್ತುಗಳನ್ನು ಫ್ರೀಝರ್ ನಲ್ಲಿ ಇಡಬಾರದು

ಮನೆಗೆ ಏನೇ ವಸ್ತುಗಳನ್ನು ತಂದರೂ ಹಾಳಾಗದಂತೆ ಫ್ರಿಡ್ಜ್ ನಲ್ಲಿಟ್ಟು ಬಿಡುತ್ತೇವೆ. ಆದರೆ ವಿಶೇಷವಾಗಿ ಕೆಲವೊಂದು ವಸ್ತುಗಳನ್ನು ಫ್ರಿಡ್ಜ್ ನ ಫ್ರೀಝರ್ ನಲ್ಲಿಡಬಾರದು. ಅಂತಹ ವಸ್ತುಗಳು ಯಾವುವು ನೋಡಿ.

Photo Credit: Instagram

ಸೋರೆಕಾಯಿ, ಹೀರೆಕಾಯಿಯಂತಹ ನೀರಿನಂಶ ಅಧಿಕವಿರುವ ತರಕಾರಿಗಳನ್ನು ಫ್ರೀಝರ್ ನಲ್ಲಿಡಬಾರದು

ಹಾಲು, ಮೊಸರಿನಂತಹ ಡೈರಿ ಉತ್ಪನ್ನಗಳನ್ನು ಇಡುವುದು ಅನಾರೋಗ್ಯಕರ ಮತ್ತು ರುಚಿ ಕಳೆದುಕೊಳ್ಳುತ್ತದೆ

ಪ್ರೆಂಚ್ ಫ್ರೈನಂತಹ ಫ್ರೈ ಮಾಡಿದ ವಸ್ತುಗಳನ್ನು ಫ್ರೀಝರ್ ನಲ್ಲಿಟ್ಟರೆ ಮೆತ್ತಗಾಗಬಹುದು

ಸಲಾಡ್ ನಂತಹ ಆಹಾರ ಪದಾರ್ಥಗಳನ್ನು ಫ್ರೀಝರ್ ನಲ್ಲಿಟ್ಟರೆ ಅದು ಕಪ್ಪಗಾಗಬಹುದು

ಕಾಫಿ ಕೋಲ್ಡ್ ಮಾಡುವ ಅಭ್ಯಾಸವಿದ್ದರೆ ಫ್ರೀಝರ್ ನಲ್ಲಿಡುವುದರಿಂದ ಸ್ವಾದ ಹೋಗಬಹುದು

ಪಾಸ್ತಾದಂತಹ ಫಾಸ್ಟ್ ಫುಡ್ ಗಳನ್ನು ಫ್ರೀಝ್ ಮಾಡುವುದರಿಂದ ರುಚಿ ಕಳೆದುಕೊಳ್ಳಬಹುದು

ಈರುಳ್ಳಿ, ಬೆಳ್ಳುಳ್ಳಿಗಳನ್ನು ಫ್ರೀಝರ್ ನಲ್ಲಿಟ್ಟರೆ ಕೊಳೆತು ಹೋಗಬಹುದು