ತೂಕ ಇಳಿಕೆಗೆ ರಾತ್ರಿ ಈ ಆಹಾರ ಬಿಡಿ

ಅನೇಕರು ಬೆಲ್ಲಿ ಫ್ಯಾಟ್ ಅಥವಾ ತೂಕ ಹೆಚ್ಚಳದಿಂದ ಚಿಂತೆಗೀಡಾಗಿರುತ್ತಾರೆ. ತೂಕ ಇಳಿಕೆಗೆ ನಾನಾ ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ತೂಕ ಇಳಿಕೆ ಮಾಡಬೇಕೆಂದಿದ್ದರೆ ಮುಖ್ಯವಾಗಿ ರಾತ್ರಿ ವೇಳೆ ಈ ಆಹಾರಗಳನ್ನು ತ್ಯಜಿಸಬೇಕು.

credit: social media

ಅತೀ ಹೆಚ್ಚು ಕ್ಯಾಲೊರಿ ಅಂಶ ಹೊಂದಿರುವ ಸೋಡಾ ಮಿಶ್ರಿತ ಜ್ಯೂಸ್ ಗಳನ್ನು ರಾತ್ರಿ ಸೇವಿಸಬೇಡಿ

ಸಂಸ್ಕರಿತ ಮಾಂಸವನ್ನು ರಾತ್ರಿ ವೇಳೆ ಸೇವಿಸುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ

ಬೇಡದ ಕೊಬ್ಬಿನಾಂಶವನ್ನು ಹೊಂದಿರುವ ಪಿಜ್ಜಾದಂತಹ ಜಂಕ್ ಫುಡ್ ಗಳನ್ನು ರಾತ್ರಿ ಅವಾಯ್ಡ್ ಮಾಡಿ

ಅಧಿಕ ಪೋಷಕಾಂಶದ ಜೊತೆಗೆ ಕ್ಯಾಲೊರಿ ಹೆಚ್ಚಿರುವ ನಟ್ಸ್ ಗಳನ್ನು ರಾತ್ರಿ ಸೇವಿಸಬೇಡಿ

ಕ್ಯಾಲೊರಿ ಜೊತೆಗೆ ಕೊಬ್ಬಿನಂಶವಿರುವ ಸಂಸ್ಕರಿತ ಸಕ್ಕರೆಯುಳ್ಳ ಐಸ್ ಕ್ರೀಂ ಸೇವಿಸಬೇಡಿ

ಅಧಿಕ ಕ್ಯಾಲೊರಿ ಅಂಶವಿರುವ ಫ್ರೆಂಚ್ ಫ್ರೈ ಅಥವಾ ಕರಿದ ತಿಂಡಿಗಳನ್ನು ರಾತ್ರಿ ಸೇವಿಸಬೇಡಿ

ಅಧಿಕ ಸಕ್ಕರೆ ಅಂಶ, ಕೊಬ್ಬಿನಂಶವಿರುವ ಚಾಕಲೇಟ್ ಗಳನ್ನು ರಾತ್ರಿ ಸೇವಿಸುವುದು ಉತ್ತಮವಲ್ಲ