ನಿದ್ರೆ ಚೆನ್ನಾಗಿರಬೇಕಾದರೆ ರಾತ್ರಿ ಈ ಆಹಾರ ತ್ಯಜಿಸಿ

ರಾತ್ರಿ ಮಲಗಿದರೆ ನಿದ್ರೆಯೇ ಬರಲ್ಲ ಎಂದು ಹೊರಳಾಡುವವರು ತಮ್ಮ ಜೀವನಶೈಲಿ, ಆಹಾರ ಶೈಲಿಯಲ್ಲೂ ಕೆಲವೊಂದು ಬದಲಾವಣೆ ತರಬೇಕಾಗುತ್ತದೆ. ರಾತ್ರಿ ಮಲಗುವ ಮುನ್ನ ಕೆಲವು ಆಹಾರಗಳನ್ನು ತ್ಯಜಿಸಿದರೆ ನಿದ್ರೆ ಚೆನ್ನಾಗಿ ಆಗಬಹುದು.

credit: social media

ರಾತ್ರಿ ಮಲಗುವ ಮುನ್ನ ಯಾವ ಆಹಾರ ಸೇವಿಸುತ್ತೇವೆ ಎನ್ನುವುದು ನಿದ್ರೆ ಬರುವುದಕ್ಕೆ ಕಾರಣವಾಗುತ್ತದೆ

ದೇಹಕ್ಕೆ ಒಗ್ಗುವ ಆಹಾರ ಶೈಲಿಯಿಲ್ಲದೇ ಇದ್ದರೆ ರಾತ್ರಿ ನಿದ್ರೆಗೂ ಭಂಗವಾಗಬಹುದು

ಮಲಗುವ ಮುನ್ನ ಕಾಫಿ, ಚಹಾದಂತಹ ಕೆಫೈನ್ ಅಂಶ ಹೆಚ್ಚಿರುವ ಆಹಾರ ಬೇಡ

ಹೆಚ್ಚು ಖಾರವಿರುವ ಆಹಾರ ಸೇವನೆಯಿಂದ ಹೊಟ್ಟೆಯಲ್ಲಿ ಕಿರಿಕಿರಿಯಾಗಿ ನಿದ್ರೆಗೆ ಭಂಗವಾಗಬಹುದು

ಹೆಚ್ಚು ಕೊಬ್ಬಿನಂಶವಿರುವ ಆಹಾರ ಸೇವನೆಯಿಂದ ಜೀರ್ಣಕ್ರಿಯೆಯಾಗದೇ ನಿದ್ರೆ ಹಾಳಾದೀತು

ಮದ್ಯ ಸೇವನೆ ಮಾಡುವುದರಿಂದ ಮತ್ತಿನಲ್ಲಿ ತೇಲಾಡಬಹುದು, ಆದರೆ ಸುಖವಾದ ನಿದ್ರೆಯಾಗದು

ಅತಿಯಾದ ಸಿಹಿ ಪದಾರ್ಥದಿಂದ ಮೆದುಳು ರಿಲ್ಯಾಕ್ಸ್ ಆಗದೇ ನಿದ್ರೆ ಬಾರದಂತಾಗಬಹುದು