ಫುಡ್ ಪಾಯಿಸನ್ ಆದಾಗ ಹೀಗೆ ಮಾಡಿ

ಹೊರಗಿನ ಆಹಾರ ತಿಂದಾಗ ಏನೋ ಎಡವಟ್ಟಾಗಿ ಫುಡ್ ಪಾಯಿಸನ್ ಆಗುವುದು ಸಾಮಾನ್ಯ. ಕೆಲವೊಮ್ಮೆ ಇದು ವಿಪರೀತಕ್ಕೆ ಹೋಗಬಹುದು. ಸಣ್ಣ ಮಟ್ಟಿನ ಫುಡ್ ಪಾಯಿಸನ್ ಆಗಿದ್ದರೆ ಅದಕ್ಕೆ ಮನೆಯಲ್ಲಿಯೇ ಆಹಾರದಲ್ಲಿ ಕಟ್ಟುನಿಟ್ಟು ಮಾಡಿ ಚಿಕಿತ್ಸೆ ಮಾಡಿಕೊಳ್ಳಬಹುದು.

credit: social media

ಫುಡ್ ಪಾಯಿಸನ್ ಆದಾಗ ವಾಂತಿಯಾಗುತ್ತಿದ್ದರೆ ನಿರ್ಜಲೀಕರಣಕ್ಕೊಳಗಾಗದಂತೆ ಪಾನೀಯ ಸೇವಿಸುತ್ತಿರಿ

ಜೀರ್ಣ ಕ್ರಿಯೆ ಸುಧಾರಿಸಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ನಿಂಬೆ ಹಣ್ಣಿನ ರಸ, ಪಾನಕ ಉತ್ತಮ

ಬಾಳೆಹಣ್ಣಿನಲ್ಲಿ ದೇಹಕ್ಕೆ ಶಕ್ತಿ ನೀಡುವ ಸಾಮರ್ಥ್ಯವಿದ್ದು ಜೀರ್ಣಕ್ರಿಯೆಯೂ ಸುಗಮವಾಗಿಸುತ್ತದೆ

ಧನಿಯಾ ಅಥವಾ ಜೀರಿಗೆ ಕಾಳು ಹಾಕಿದ ಕಷಾಯ ಮಾಡಿಕೊಂಡು ಸೇವಿಸಿದರೆ ಉತ್ತಮ

ಶುಂಠಿ ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ಜೀರ್ಣಶಕ್ತಿ ಹೆಚ್ಚಿಸಲು ಶುಂಠಿ ಸೇವಿಸಿ

ಆಪಲ್ ಸೈಡ್ ವಿನೇಗರ್ ಜ್ಯೂಸ್ ಸೇವಿಸುತ್ತಿದ್ದರೆ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ

ಫುಡ್ ಪಾಯಿಸನ್ ಗೆ ಮನೆಮದ್ದು ಮಾಡುವ ಮೊದಲು ತಜ್ಞ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ