ಕಿಡ್ನಿ ಆರೋಗ್ಯ ವೃದ್ಧಿಸುವ ಆಹಾರಗಳು

ಇತ್ತೀಚಿನ ದಿನಗಳಲ್ಲಿ ಮನುಷ್ಯರಿಗೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಈಗ ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಎನ್ನುವ ಕಾಲ. ರೋಗವನ್ನು ಬರುವ ಮೊದಲೇ ತಡೆಗಟ್ಟಬೇಕು. ಇಲ್ಲದಿದ್ದರೆ ಒಂದಿಲ್ಲೊಂದು ಅಪಾಯಗಳು, ಒಂದರ ಹಿಂದೆ ಒಂದರಂತೆ ಸಾಲಾಗಿ ಬರುತ್ತವೆ. ಹಾಗಾಗಿ ಆಹಾರಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದು ಬೆಸ್ಟ್‌ ಅಂತಲೇ ಹೇಳಬಹುದು.

photo credit social media

ಕೊತ್ತಂಬರಿ ಬೀಜ ಹಾಗೂ ಸೊಪ್ಪು ಎರಡೂ ಕಿಡ್ನಿಯ ಆರೋಗ್ಯಕ್ಕೆ ಬಹಳ ಉತ್ತಮ. ಇದು ಮೂತ್ರವರ್ಧಕವಾಗಿರುವುದರಿಂದ ಹೆಚ್ಚುವರಿ ಸೋಡಿಯಂ ಮತ್ತು ನೀರನ್ನು ದೇಹದಿಂದ ಹೊರ ಹೋಗುವಂತೆ ಮಾಡುತ್ತದೆ. ಇದು ಮೂತ್ರನಾಳದ ಸೋಂಕಿನ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ತುಳಸಿಯು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ಚಯಾಪಚಯವನ್ನು ಹೆಚ್ಚಿಸುವ ಮೂಲಕ ದೇಹದಿಂದ ವಿಷವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಚಹಾಕ್ಕೆ ಎರಡು ಎಲೆ ತುಳಸಿ ಸೇರಿಸಬಹುದು ಅಥವಾ ನೀರಿನಲ್ಲಿ ತುಳಸಿ ಎಲೆಗಳನ್ನು ಸೇರಿಸಿ, ಕುದಿಸಿ ಕುಡಿಯಬಹುದು.

ಇದು ಅತ್ಯುತ್ತಮ ಉರಿಯೂತ ನಿವಾರಣ ಗುಣಗಳನ್ನು ಹೊಂದಿದೆ. ಅಲ್ಲದೆ ಇದು ಮೂತ್ರವರ್ಧಕವೂ ಹೌದು. ಇದರ ಬೇರುಗಳನ್ನು ಪುಡಿ ಮಾಡಿ ಬಳಸಬಹುದು.

ಗೋಕ್ಷುರಾ ಎಂದೂ ಕರೆಯುವ ಈ ಆಯುರ್ವೇದ ಮೂಲಕೆಯು ಚಯಾಪಚಯ ಕ್ರಿಯೆಗಳಾದ ಅನಾಬೊಲಿಸಮ್‌ ಮತ್ತು ಕ್ಯಾಟಬಾಲಿಸಮ್‌ ಎಂಬ ಎರಡೂ ಅಂಶಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕೂಡ ಮೂತ್ರವರ್ಧಕ ಮೂಲಿಕೆಯಾಗಿದೆ. ಇದು ಮೂತ್ರದ ಉತ್ಪಾದನೆ ಹೆಚ್ಚಲು ಸಹಾಯ ಮಾಡುತ್ತದೆ.

ಶುಂಠಿಯು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಆಯುರ್ವೇದದ ಪ್ರಕಾರ ಮೂತ್ರಪಿಂಡದ ಸಮಸ್ಯೆಗಳಿಗೆ ಉರಿಯೂತ ಪ್ರಮುಖ ಕಾರಣ. ಶುಂಠಿಯು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮೂತ್ರಪಿಂಡಗಳ ಹಾನಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಅಧಿಕ ರಕ್ತದೊತ್ತಡವು ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತದೆ. ಬೆಳ್ಳುಳ್ಳಿಯು ರಕ್ತದೊತ್ತಡವನ್ನು ನಿವಾರಿಸುವ ಗುಣವನ್ನು ಹೊಂದಿದೆ. ಇದು ಕಿಡ್ನಿಗೆ ಉತ್ತಮವಾಗಿರುವ ಗಿಡಮೂಲಿಕೆಯಾಗಿದೆ.

ಅರಿಸಿನದಲ್ಲಿ ಬಲವಾದ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿರುವ ಕರ್ಕ್ಯುಮಿನ್‌ ಎಂಬ ಸಂಯುಕ್ತವನ್ನು ಹೊಂದಿದೆ. ಆಯುರ್ವೇದದ ಪ್ರಕಾರ ಉರಿಯೂತ ಮತ್ತು ಆಕ್ಸಿಡೇಟಿವ್‌ ಒತ್ತಡವನ್ನು ಕಡಿಮೆ ಮಾಡುವುದು ಮೂತ್ರಪಿಂಡದ ಆರೋಗ್ಯ ಸುಧಾರಣೆಗೆ ಉತ್ತಮ. ಇದು ಮೂತ್ರಪಿಂಡದ ಕಾರ್ಯವನ್ನು ಪುನರುಜ್ಜೀವನಗೊಳಿಸುತ್ತದೆ.