ಬೆಳಿಗ್ಗೆ ಎದ್ದ ತಕ್ಷಣ ನೀವು ಸೇವಿಸಬೇಕಾದ ವಸ್ತುಗಳು

ಬೆಳಿಗ್ಗೆ ಎದ್ದ ತಕ್ಷಣ ಕೆಲವರಿಗೆ ಕಾಫಿ, ಟೀ ಸೇವಿಸುವ ಅಭ್ಯಾಸವಿರುತ್ತದೆ. ಕಾಫಿ, ಟೀ ಸೇವನೆ ಆರೋಗ್ಯಕರ ಅಭ್ಯಾಸವಲ್ಲ. ನಮ್ಮ ದೇಹ ಆರೋಗ್ಯವಾಗಿರಬೇಕಾದರೆ ಬೆಳಗ್ಗೆ ಎದ್ದ ತಕ್ಷಣ ನಾವು ಯಾವ ಆಹಾರ ವಸ್ತುಗಳನ್ನು ಸೇವಿಸಬೇಕು ನೋಡೋಣ.

credit: social media

ಬೆಳಿಗ್ಗೆ ಎದ್ದ ತಕ್ಷಣ ಕರಿದ ತಿಂಡಿಗಳು, ಕಾಫಿ, ಮಸಲಾಭರಿತ ಆಹಾರವನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ

ಬೆಳಿಗ್ಗೆ ಎದ್ದ ತಕ್ಷಣ ಒಂದ ಲೋಟ ಉಗುರು ಬೆಚ್ಚಿನ ನೀರನ್ನು ಸೇವಿಸುವುದರಿಂದ ಹೊಟ್ಟೆ ಶುದ್ಧಿಯಾಗುತ್ತದೆ

ಉಗುರು ಬೆಚ್ಚಗಿನ ನೀರಿಗೆ ಜೇನು ತುಪ್ಪ ಮತ್ತು ನಿಂಬೆ ರಸ ಸೇರಿಸಿಕೊಂಡು ಸೇವಿಸಿದರೆ ಉತ್ತಮ

ಖನಿಜಾಂಶಗಳು ದೇಹಕ್ಕೆ ಸೇರಿ ಜೀರ್ಣಕ್ರಿಯೆ ಸುಗಮವಾಗಲು ತರಕಾರಿ ಜ್ಯೂಸ್ ಗಳನ್ನು ಸೇವಿಸಿ

ರಾತ್ರಿ ನೆನೆ ಹಾಕಿದ ಅಂಜೂರ, ಒಣದ್ರಾಕ್ಷಿ, ಬಾದಾಮಿಯನ್ನು ಸೇವಿಸುವುದು ಆರೋಗ್ಯಕರವಾಗಿದೆ.

ಬೆಳಿಗ್ಗೆ ಎದ್ದ ತಕ್ಷಣ ಜೀರಿಗೆ ಅಥವಾ ಧನಿಯಾ ಕಾಳು ಹಾಕಿ ಮಾಡಿದ ಕಷಾಯ ಸೇವಿಸಬಹುದು

ದಿನವಿಡೀ ಶಕ್ತಿಯುತವಾಗಿ ಕಳೆಯಲು ಸಾಕಷ್ಟು ಕೊಬ್ಬಿನಂಶವಿರುವ ಬೆಣ್ಣೆ ಸೇವಿಸಬಹುದು