ಪ್ರತಿನಿತ್ಯ ನಾವು ಅನ್ನ ಸೇವಿಸಿಯೇ ಸೇವಿಸುತ್ತೇವೆ. ಆದರೆ ಸಾಮಾನ್ಯವಾಗಿ ನಾವು ಬಳಸುವ ಬಿಳಿ ಬಣ್ಣದ ಅಕ್ಕಿ ಸಂಸ್ಕರಿತವಾಗಿರುತ್ತದೆ. ಆದರೆ ಆರೋಗ್ಯಕ್ಕೆ ಉತ್ತಮವಾದುದು ಸಂಸ್ಕರಿಸದ ಕಂದು ಅಕ್ಕಿ. ಇದರ ಪ್ರಯೋಜನಗಳ ಬಗ್ಗೆ ತಿಳಿಯಿರಿ.
credit: social media
ಕಂದು ಅಕ್ಕಿಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಇದು ಅರೋಗ್ಯಕ್ಕೆ ಅತ್ಯುತ್ತಮವಾಗಿದೆ.
ಮಧುಮೇಹಿಗಳಿಗೆ ಬಿಳಿ ಅಕ್ಕಿ ಸೇವನೆಗಿಂತ ಕಂದು ಅಕ್ಕಿಸೇವನೆಯೇ ಅತ್ಯುತ್ತಮವಾಗಿದೆ.
ಹೃದ್ರೋಗಿಗಳಿಗೆ ಮತ್ತು ಹೃದಯ ರೋಗ ಬಾರದಂತೆ ತಡೆಯಲು ಕಂದು ಅಕ್ಕಿ ಸೇವನೆ ಮಾಡಿ
ಪೋಷಕಾಂಶಗಳು ಹೇರಳವಾಗಿರುವ ಕಂದು ಅಕ್ಕಿ ನಮ್ಮ ದೇಹಕ್ಕೆ ಶಕ್ತಿ ಒದಗಿಸುತ್ತದೆ.
ಫೈಬರ್ ಅಂಶ ಹೇರಳವಾಗಿರುವುದರಿಂದ ಜೀರ್ಣವಾಗಲು ಕಂದು ಅಕ್ಕಿ ಸೇವನೆ ಉತ್ತಮ
ಬೇಧಿಯಂತಹ ಅಜೀರ್ಣವಾದಾಗ ದೇಹಕ್ಕೆ ಶಕ್ತಿ ಒದಗಿಸಲು ಕಂದು ಅಕ್ಕಿ ಸೇವನೆ ಮಾಡಿ
ಇದರಲ್ಲಿ ಫೈಬರ್ ಅಂಶ ಹೆಚ್ಚಿದ್ದು, ಕ್ಯಾಲೊರಿ ಕಡಿಮೆಯಿರುವುದರಿಂದ ತೂಕ ಇಳಿಕೆಗೆ ಉತ್ತಮ