ದಾಳಿಂಬೆಯಲ್ಲಿ ಕಬ್ಬಿಣದಂಶ ಹೇರಳವಾಗಿದ್ದು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಾಮಬಾಣ ಎಂದು ನಮಗೆಲ್ಲಾ ಗೊತ್ತು. ಪ್ರತಿನಿತ್ಯ ದಾಳಿಂಬೆ ಜ್ಯೂಸ್ ಮಾಡಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಎಷ್ಟೆಲ್ಲಾ ಉಪಯೋಗವಿದೆ ಎಂದು ತಿಳಿದುಕೊಳ್ಳಿ.
credit: social media
ಸಾಕಷ್ಟು ಪೋಷಕಾಂಶಗಳಿರುವ ದಾಳಿಂಬೆ ನಮ್ಮ ದೇಹಕ್ಕೆ ಸೂಪರ್ ಫುಡ್ ಆಗಿ ಕೆಲಸ ಮಾಡುತ್ತದೆ.
ಪ್ರತಿನಿತ್ಯ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚುವಂತೆ ಮಾಡುತ್ತದೆ.
ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಹೃದಯದ ಆರೋಗ್ಯ, ಹೃದಯ ಸಂಬಂಧೀ ರೋಗಗಳಿಗೆ ಪರಿಹಾರ ನೀಡುತ್ತದೆ.
ಆರ್ಥರೈಟಿಸ್, ಕ್ಯಾನ್ಸರ್, ಮಧುಮೇಹ ಮುಂತಾದ ರೋಗಗಳಿಂದ ಬಳಲುತ್ತಿರುವವರು ಪ್ರತಿ ನಿತ್ಯ ಜ್ಯೂಸ್ ಸೇವನೆ ಮಾಡುವುದು ಉತ್ತಮ
ಕೆಂಪಗೆಯ ಹಿತಕರವಾದ ಜ್ಯೂಸ್ ಕೇವಲ ನಾಲಿಗೆಗೆ ರುಚಿ ಅಷ್ಟೇ ಅಲ್ಲ, ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವನ್ನೂ ಹೊಂದಿದೆ.
ಫೈಬರ್ ಅಂಶ ಹೇರಳವಾಗಿರುವುದರಿಂದ ದಾಳಿಂಬೆ ಜ್ಯೂಸ್ ಪ್ರತಿನಿತ್ಯ ಸೇವಿಸಿದರೆ ಜೀರ್ಣ ಸಂಬಂಧೀ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ.
ಆದರೆ ಗಮನಿಸಿ, ಯಾವುದೇ ಪ್ರಯೋಗಗಳನ್ನು ಮಾಡುವ ಮೊದಲು ತಜ್ಞರ ವೈದ್ಯರ ಸಲಹೆ ಪಡೆದು ಮುಂದುವರಿಯಿರಿ.