ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವಿದೆಯೇ? ಹಾಗಿದ್ದರೆ ಅದನ್ನು ಬಿಟ್ಟು ನೀರು ಕುಡಿಯುವುದನ್ನು ಅಭ್ಯಾಸ ಮಾಡಿ. ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜುವ ಮುನ್ನವೇ ನೀರು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ.
credit: social media
ಹಲ್ಲುಜ್ಜುವ ಮೊದಲು ಖಾಲಿ ಹೊಟ್ಟೆಯಲ್ಲಿ ಹದ ಬಿಸಿ ನೀರನ್ನು ಸೇವಿಸುವುದನ್ನು ಅಭ್ಯಾಸ ಮಾಡಿ
ಹಲ್ಲುಜ್ಜುವ ಮುನ್ನ ನೀರು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
ಕಾಂತಿಯುತ ಚರ್ಮಕ್ಕಾಗಿ ಏನೆಲ್ಲವೋ ಸರ್ಕಸ್ ಮಾಡುವ ಬದಲು ಹಲ್ಲುಜ್ಜುವ ಮುನ್ನ ನೀರು ಕುಡಿದು ನೋಡಿ
ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಹಲ್ಲುಜ್ಜುವ ಮೊದಲೇ ನೀರು ಕುಡಿದರೆ ಉತ್ತಮ
ಬೆಳಿಗ್ಗೆ ಟಾಯ್ಲೆಟ್ ನಲ್ಲಿ ತಿಣುಕಾಡುವ ಪರಿಸ್ಥಿತಿಯಿದ್ದರೆ ಹಲ್ಲುಜ್ಜುವ ಮುನ್ನ ಬಿಸಿ ನೀರು ಸೇವಿಸಿ.
ಬಾಯಿ ವಾಸನೆ ಸಮಸ್ಯೆಯಿಂದ ಬಳಲುತ್ತಿದ್ದರೆ ಹಲ್ಲುಜ್ಜುವ ಮುನ್ನ ನೀರು ಸೇವನೆ ಅಭ್ಯಾಸ ಮಾಡಿ
ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿರುವವರೂ ಈ ಅಭ್ಯಾಸ ಮಾಡಿಕೊಂಡರೆ ಉತ್ತಮ