ಅಡುಗೆ ಮಾಡುವಾಗ ತರಕಾರಿಗಳನ್ನು ಪೂರ್ತಿಯಾಗಿ ಬೇಯಿಸುವುದಕ್ಕಿಂತ ಅರ್ಧಂಬರ್ಧ ಬೇಯಿಸಿ ತಿಂದರೆ ಉತ್ತಮ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ರೀತಿ ತರಕಾರಿಗಳನ್ನು ಸಂಪೂರ್ಣವಾಗಿ ಬೇಯಿಸಿದರೆ ಉತ್ತಮವೋ, ಅರೆಬರೆ ಬೇಯಿಸಿದರೆ ಉತ್ತಮವೋ ನೋಡೋಣ.
Photo Credit: Social Media
ತಾಜಾ ತರಕಾರಿಗಳಲ್ಲಿ ಸಾಕಷ್ಟು ಪೋಷಕಾಂಶಗಳು, ಖನಿಜಾಂಶಗಳು ಅಡಗಿರುತ್ತವೆ
ಅಗತ್ಯಕ್ಕಿಂತ ಹೆಚ್ಚು ಬೇಯಿಸುವುದರಿಂದ ತರಕಾರಿಯಲ್ಲಿರುವ ಪೋಷಕಾಂಶಗಳು ನಷ್ಟವಾಗಬಹುದು
ಕೆಲವೊಂದು ತರಕಾರಿಗಳನ್ನು ಹಸಿಯಾಗಿಯೇ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ
ಅರೆಬರೆ ಬೇಯಿಸಿ ತಿನ್ನುವುದರಿಂದ ಗ್ಯಾಸ್ಟ್ರಿಕ್, ಅಸಿಡಿಟಿಯಂತಹ ಜೀರ್ಣ ಸಮಸ್ಯೆಗಳು ಬಾರದು
ತರಕಾರಿಗಳನ್ನು ಅರೆಬರೆ ಬೇಯಿಸಿ ತಿನ್ನುವುದರಿಂದ ನಮ್ಮ ಚರ್ಮದ ಆರೋಗ್ಯ ಚೆನ್ನಾಗಿರುತ್ತದೆ
ತರಕಾರಿಯನ್ನು ಸಂಪೂರ್ಣವಾಗಿ ಬೇಯಿಸುವುದರಿಂದ ಆಂಟಿ ಆಕ್ಸಿಡೆಂಟ್ ಗಳು ನಷ್ಟವಾಗುತ್ತದೆ
ತರಕಾರಿಗಳನ್ನು ಅರೆಬರೆಯಾಗಿ ಬೇಯಿಸುವುದರಿಂದ ಅದರಲ್ಲಿರುವ ಫೈಬರ್ ಅಂಶ ನಷ್ಟವಾಗದು