ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೊಳಕೆ ಕಾಳು ಸೇವಿಸುವುದು ಉತ್ತಮ ಎಂದು ತಜ್ಞರೇ ಹೇಳುತ್ತಾರೆ. ಹಾಗಿದ್ದರೆ ಮೊಳಕೆ ಕಾಳು ಸೇವನೆಯಿಂದ ನಮ್ಮ ದೇಹಕ್ಕೆ ಆಗುವ ಅದ್ಭುತ ಪ್ರಯೋಜನಗಳು ಏನು ಎಂದು ತಿಳಿದುಕೊಳ್ಳಿ.
credit: social media
ಮೊಳಕೆ ಕಾಳಿನಲ್ಲಿ ಸಾಕಷ್ಟು ವಿಟಮಿನ್ ಗಳಿದ್ದು ಆರೋಗ್ಯಕ್ಕೆ ಇದನ್ನು ಸೇವಿಸುವುದು ಅತ್ಯುತ್ತಮವಾಗಿದೆ.
ಮೊಳಕೆ ಕಾಳಿನಲ್ಲಿ ಕ್ಯಾಲೊರಿ ಕಡಿಮೆ ಪ್ರಮಾಣದಲ್ಲಿದ್ದು, ತೂಕ ಇಳಿಸುವವರಿಗೆ ಸಹಕಾರಿ.
ಫೈಬರ್ ಅಂಶ ಸಾಕಷ್ಟಿರುವ ಕಾರಣ ಮೊಳಕೆ ಕಾಳು ಸೇವನೆಯಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ.
ಅತ್ಯಂತ ಕಡಿಮೆ ಕೊಬ್ಬಿನಂಶವಿರುವ ಮೊಳಕೆ ಕಾಳುಗಳ ಸೇವನೆಯಿಂದ ಕೊಲೆಸ್ಟ್ರಾಲ್ ಅಂಶ ಕಡಿಮೆ ಮಾಡಬಹುದು
ಮೊಳಕೆ ಕಾಳುಗಳು ದೇಹವನ್ನು ನಿರ್ವಿಷಗೊಳಿಸುತ್ತವೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ವಿಟಮಿನ್ ಎ ಅಂಶ ಹೇರಳವಾಗಿರುವ ಕಾರಣ ಕಣ್ಣುಗಳ ಆರೋಗ್ಯ ಸಂರಕ್ಷಣೆ ಮಾಡುತ್ತದೆ.
ಮೊಳಕೆ ಕಾಳಿನಲ್ಲಿ ಹೇರಳವಾಗಿರುವ ವಿಟಮಿನ್ ಸಿ ಅಂಶ ಕೂದಲು ಬೆಳವಣಿಗೆಗೆ ಸಹಕಾರಿ.