ಕರಾವಳಿ ಕಡೆ ಬೆಳಗ್ಗಿನ ಹೊತ್ತು ಗಂಜಿ ಊಟ ಮಾಡುವ ಪದ್ಧತಿಯಿದೆ. ಕುಚ್ಚಿಲಕ್ಕಿ ಅನ್ನ, ಗಂಜಿಯ ಜೊತೆಗೆ ಒಂಚೂರು ಉಪ್ಪಿನಕಾಯಿ ಹಾಕಿಕೊಂಡು ತಿನ್ನುವ ಮಜವೇ ಬೇರೆ. ಆದರೆ ಈ ಗಂಜಿ ಊಟ ಆರೋಗ್ಯಕ್ಕೆ ಎಷ್ಟು ಉಪಯುಕ್ತ ಗೊತ್ತಾ?
Photo Credit: Social Media
ಕುಚ್ಚಿಲಕ್ಕಿ ಅನ್ನ, ತಿಳಿಯ ಜೊತೆಗೆ ಉಪ್ಪು, ತುಪ್ಪ ಹಾಗೂ ನೆಚ್ಚಿಕೊಳ್ಳಲು ಉಪ್ಪಿನಕಾಯಿ ಇದ್ದರೆ ಸ್ವರ್ಗ
ಕರಾವಳಿ ಕಡೆ ಬೆಳಿಗ್ಗೆ ಹೊತ್ತು ಗಂಜಿ ಊಟ ಮಾಡುವ ಪದ್ಧತಿ ಅತ್ಯಂತ ಜನಪ್ರಿಯವಾಗಿದೆ.
ಗಂಜಿ ತಿಳಿ ಸಮೇತ ಅನ್ನ ಸೇವನೆ ಮಾಡುವುದರಿಂದ ದೇಹ ನಿರ್ಜಲೀಕರಣಕ್ಕೊಳಗಾಗದಂತೆ ತಡೆಯಬಹುದು.
ಅಜೀರ್ಣದಿಂದಾಗಿ ಬೇಧಿ, ವಾಂತಿ ಮುಂತಾದ ಸಮಸ್ಯೆಯಿದ್ದರೆ ಗಂಜಿ ಊಟ ಮಾಡುವುದು ಉತ್ತಮ
ಬಾಡಿ ಹೀಟ್ ಆದಾಗ ದೇಹ ತಂಪಾಗಿಡಲು ಗಂಜಿ ಊಟ ಸೇವನೆ ಮಾಡುವುದು ಆರೋಗ್ಯಕರ
ಕುಚ್ಚಿಲಕ್ಕಿಯಲ್ಲಿ ದೇಹಕ್ಕೆ ಶಕ್ತಿ ನೀಡುವ ಅಂಶವಿದ್ದು, ಇದರ ಗಂಜಿ ಸೇವನೆ ಮಾಡುವುದರಿಂದ ನಿಶ್ಯಕ್ತಿ ಹೋಗುತ್ತದೆ
ಕುಚ್ಚಿಲಕ್ಕಿಯಲ್ಲಿ ಸಾಕಷ್ಟು ಫೈಬರ್ ಅಂಶವಿದ್ದು ಜೀರ್ಣಕ್ರಿಯೆ ಸುಗಮವಾಗಲು ಸಹಕಾರಿಯಾಗಿದೆ.