ಕಹಿಯಾದರೂ ಮಕ್ಕಳಿಗೆ ಶ್ರೀಗಂಧ ನೀಡಲೇಬೇಕು ಯಾಕೆ

ರುಚಿಯಲ್ಲಿ ಕಹಿಯಾದರೂ ಕೆಲವೊಂದು ನೀಡುವ ಫಲ ಸಿಹಿಯಾಗಿರುತ್ತದೆ. ಅಂತಹವುಗಳಲ್ಲಿ ಶ್ರೀಗಂಧವೂ ಒಂದು. ಶ್ರೀಗಂಧವನ್ನು ಪುಟ್ಟ ಮಕ್ಕಳಿಗೆ ನೀಡಲೇಬೇಕು. ದೊಡ್ಡವರೂ ಇದನ್ನು ಸೇವಿಸಬಹುದು. ಸೌಗಂಧಭರಿತ ಶ್ರೀಗಂಧದ ಆರೋಗ್ಯಕರ ಉಪಯೋಗಗಳನ್ನು ತಿಳಿಯಿರಿ.

Photo Credit: Social Media

ಆಯುರ್ವೇದ ಔಷದಿಗಳಲ್ಲಿ ಪ್ರಮುಖವಾಗಿ ಬಳಕೆಯಾಗುವ ಸೌಗಂಧಭರಿತ ವಸ್ತುಗಳಲ್ಲಿ ಶ್ರೀಗಂಧವೂ ಒಂದು

ಚಿಕ್ಕಮಕ್ಕಳಲ್ಲಿ ಕಂಡುಬರುವ ಹೊಟ್ಟೆ ನೋವಿನ ಸಮಸ್ಯೆಗೆ ಶ್ರೀಗಂಧವನ್ನು ನೀರಿನ ಜೊತೆ ಬೆರೆಸಿ ನೀಡಿ.

ನವಜಾತ ಮಕ್ಕಳಲ್ಲಿ ಕಂಡುಬರುವ ಚರ್ಮದ ಅಲರ್ಜಿ, ಗುಳ್ಳೆಗಳಾಗುವುದಿದ್ದರೆ ಶ್ರೀಗಂಧ ಹಚ್ಚಬಹುದು

ಮಕ್ಕಳ ಚರ್ಮ ನುಣುಪಾಗಿ, ಕಾಂತಿಯುತವಾಗಬೇಕಿದ್ದರೆ ಪ್ರತಿನಿತ್ಯ ಶ್ರೀಗಂಧವನ್ನು ಮೈಗೆ ಹಚ್ಚಿ.

ನವಜಾತ ಮಕ್ಕಳಿಗೆ ಬೇಧಿಯಾಗುತ್ತಿದ್ದರೆ ಶ್ರೀಗಂಧದ ಪಾನೀಯವನ್ನು ನೀಡುವುದರಿಂದ ಪರಿಹಾರ ಸಿಗುತ್ತದೆ

ಶ್ರೀಗಂಧ ತಂಪು ಗುಣವನ್ನು ಹೊಂದಿದ್ದು ಮೂತ್ರಕ್ಕೆ ಸಂಬಂಧಿಸಿದ ರೋಗಗಳಿಗೂ ಪರಿಹಾರ ನೀಡುತ್ತದೆ

ನೆನಪಿರಲಿ, ಯಾವುದೇ ಮನೆ ಮದ್ದು ಪ್ರಯೋಗ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ.