ಕಲ್ಲಂಗಡಿ ಹಣ್ಣಿನ ಸಿಪ್ಪೆ ತಿಂದರೆ ಈ ರೋಗ ಬರಲ್ಲ

ಬೇಸಿಗೆ ಬಂತೆಂದರೆ ಸಾಕು, ಮನೆಗೆ ಕಲ್ಲಂಗಡಿ ಹಣ್ಣು ತಂದಿಡುತ್ತೇವೆ. ಸಾಮಾನ್ಯವಾಗಿ ನಾವು ಕಲ್ಲಂಗಡಿ ಹಣ್ಣನ್ನು ಸವಿದು ಅದರ ಸಿಪ್ಪೆ ಭಾಗವನ್ನು ಬಿಸಾಕಿ ಬಿಡುತ್ತೇವೆ. ಆದರೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.

credit: social media

ಕಲ್ಲಂಗಡಿ ಹಣ್ಣಿನ ಸಿಪ್ಪೆಯಲ್ಲಿ ನಾರಿನಂಶ ಹೇರಳವಾಗಿದ್ದು, ಚಯಾಪಚಯ ಕ್ರಿಯೆಗೆ ಸಹಕಾರಿ

ತೂಕ ಇಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ ಪ್ರತಿನಿತ್ಯ ಕಲ್ಲಂಗಡಿ ಸಿಪ್ಪೆಯನ್ನು ಸೇವಿಸಿ

ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಕಲ್ಲಂಗಡಿ ಹಣ್ಣಿನ ಸಿಪ್ಪೆ ಸೇವಿಸಬೇಕು

ರಕ್ತದಲ್ಲಿ ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಮಟ್ಟ ಏರಿಕೆಯಾಗದಂತೆ ತೊಗಟೆ ಕಾಪಾಡುತ್ತದೆ

ವಿಟಮಿನ್ ಸಿ ಅಂಶ ಹೇರಳವಾಗಿದ್ದು ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ

ವಯಸ್ಸಾದಂತೆ ಕಂಡುಬರುವ ಚರ್ಮ ಸುಕ್ಕುಗಟ್ಟುವಿಕೆ, ಇತರೆ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ

ಕಲ್ಲಂಗಡಿ ಹಣ್ಣಿನ ತೊಗಟೆಯ ಬಿಳಿ ಭಾಗದಿಂದ ಪಲ್ಯ, ಸಾಂಬಾರ್, ದೋಸೆ ಮಾಡಬಹುದಾಗಿದೆ