ಬಿಸಿ ನೀರಿಗೆ ನಿಂಬೆ ರಸ ಹಾಕಿ ಸೇವಿಸಿದರೆ ಪ್ರಯೋಜನಗಳು

ಹದ ಬಿಸಿ ನೀರಿಗೆ ಕೊಂಚ ನಿಂಬೆ ರಸ ಸೇವಿಸಿಕೊಂಡು ಪ್ರತಿನಿತ್ಯ ಸೇವಿಸುವುದರಿಂದ ಹಲವು ಆರೋಗ್ಯಕರ ಪ್ರಯೋಜನ ಮತ್ತು ಬದಲಾವಣೆ ಕಂಡುಕೊಳ್ಳಬಹುದು. ಈ ರೀತಿ ಹದ ಬಿಸಿ ನೀರಿಗೆ ನಿಂಬೆ ಪಾನೀಯ ಸೇವಿಸುವುದರಿಂದ ಯಾವೆಲ್ಲಾ ಉಪಯೋಗಗಳಿವೆ ನೋಡಿ.

credit: social media

ಪ್ರತಿನಿತ್ಯ ಹದ ಬಿಸಿ ನೀರಿ ನಿಂಬೆ ಪಾನೀಯ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ

ನಿಂಬೆಯಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಖಾಲಿ ನೀರು ಸೇವಿಸುವುದಕ್ಕಿಂತ ನಿಂಬೆ ರಸ ಹಾಕಿ ಸೇವಿಸಿದರೆ ದೇಹ ನಿರ್ಜಲೀಕರಣಕ್ಕೊಳಗಾಗದಂತೆ ತಡೆಯುತ್ತದೆ

ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಸೇರಿಸಿದ ಹದ ಬಿಸಿ ನೀರು ಕುಡಿದರೆ ಜೀರ್ಣಕ್ರಿಯೆ ಚುರುಕಾಗುತ್ತದೆ’

ದೇಹದಲ್ಲಿ ಪ್ರಧಾನ ಅಂಗವಾಗಿರುವ ಯಕೃತ್ತಿನಲ್ಲಿರುವ ವಿಷಕಾರೀ ಅಂಶವನ್ನು ತೆಗೆದು ಶುದ್ಧೀಕರಿಸುತ್ತದೆ

ಬಾಯಿ ವಾಸನೆ ಸಮಸ್ಯೆಯಿರುವವರು ಇದನ್ನು ಸೇವಿಸಿದರೆ ಬಾಯಿ ವಾಸನೆ ನಿವಾರಣೆಯಾಗುತ್ತದೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಬಿಸಿ ನೀರಿನ ಪಾನೀಯ ಸೇವಿಸುವುದರಿಂದ ಚರ್ಮ ಕಾಂತಿಯುತವಾಗಿರುತ್ತದೆ