ಅಧಿಕ ಕೊಲೆಸ್ಟ್ರಾಲ್ ಕಡೆಗಣಿಸಿದರೆ ಎಂಥಾ ಅಪಾಯವಿದೆ ಗೊತ್ತಾ?

ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಅಧಿಕವಾದಾಗ ಹಲವು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಬಹುದು. ಕೊಲೆಸ್ಟ್ರಾಲ್ ನ್ನು ಕಡೆಗಣಿಸಿದರೆ ಯಾವೆಲ್ಲಾ ಆರೋಗ್ಯ ಸಮಸ್ಯೆ ಬರಬಹುದು ನೋಡಿ.

credit: social media

ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಬೇಕು.

ಸಮತೋಲಿತ ಆಹಾರ ಸೇವನೆ ತುಂಬಾ ಮುಖ್ಯ.

ಚರ್ಮದ ಅಡಿ ಭಾಗದಲ್ಲಿ ಬೇಡದ ಕೊಬ್ಬಿನಂಶ ಸಂಗ್ರಹವಾಗಿ ಹಳದಿ ಬಣ್ಣದಿಂದ ಕೂಡಿದ ಉಬ್ಬು ಉಂಟಾಗಬಹುದು.

ಕಣ್ಣಿನ ಸುತ್ತ ಬಿಳಿ ಅಥವಾ ಕಂದು ಬಣ್ಣದ ಗೆರೆ ಕಂಡುಬರಬಹುದು

ಕಾರ್ನಿಯಾದಲ್ಲೂ ಇದೇ ರೀತಿ ಬಿಳಿ ಅಥವಾ ಕಂದು ಬಣ್ಣ ದ ಗೆರೆ ಕಂಡುಬರಬಹುದು.

ಅಧಿಕ ಕೊಬ್ಬಿನಂಶ ರಕ್ತನಾಳಗಳನ್ನು ಬ್ಲಾಕ್ ಮಾಡುವುದರಿಂದ ಎದೆ ನೋವು ಕಾಣಿಸಿಕೊಳ್ಳಬಹುದು.

ವಿಪರೀತ ಸುಸ್ತಾಗುವುದು ಅಥವಾ ಉಸಿರಾಟಕ್ಕೆ ತೊಂದರೆ ಎದುರಾಗಬಹುದು

ಅಧಿಕ ರಕ್ತದೊತ್ತಡ ಸಮಸ್ಯೆ ಕಂಡುಬರಬಹುದು.