ಕಪ್ಪು ದ್ರಾಕ್ಷಿಯಿಂದ ಆರೋಗ್ಯ, ಕೇಶ ರಕ್ಷಣೆ

ಕಪ್ಪು ದ್ರಾಕ್ಷಿ ಕೊಂಚ ಹುಳಿ ಆದರೂ ಇದರ ಗಾಢ ಬಣ್ಣ ಹಾಗೂ ಇದರಲ್ಲಿರುವ ಪೋಷಕಾಂಶಗಳು ಇದನ್ನು ಆರೋಗ್ಯಕರ ಆಹಾರವನ್ನಾಗಿಸಿದೆ. ಕಪ್ಪು ದ್ರಾಕ್ಷಿಯ ಸೇವನೆಯಿಂದ ದೇಹದ ಬೊಜ್ಜು ಕರಗಿಸಿ ಉತ್ತಮ ಆರೋಗ್ಯ ಪಡೆಯಬಹುದೆಂದು ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

photo credit social media

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ: ಕಪ್ಪು ದ್ರಾಕ್ಷಿಯ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದರಲ್ಲಿರುವ ಪೋಷಕಾಂಶ ದೇಹದಲ್ಲಿ ಇನ್ಸುಲಿನ್ ಉತ್ಪನ್ನಕ್ಕೆ ಹೆಚ್ಚಿನ ಪ್ರಚೋದನೆ ನೀಡುತ್ತದೆ. ಇದು ವಿಶೇಷವಾಗಿ ಟೈಪ್ ಒನ್​ ಮಧುಮೇಹಿಗಳಿಗೆ ವರದಾನವಾಗಿದ್ದು ಮಧುಮೇಹವನ್ನು ಸಾಕಷ್ಟು ಮಟ್ಟಿಗೆ ಕಡಿಮೆಗೊಳಿಸುತ್ತದೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ: ನಿಯಮಿತವಾಗಿ ಕಪ್ಪು ದ್ರಾಕ್ಷಿಯನ್ನು ಸೇವಿಸುವ ಮೂಲಕ ಏಕಾಗ್ರತೆ, ಸ್ಮರಣಶಕ್ತಿ ಹೆಚ್ಚುವುದು ಹಾಗೂ ಮೈಗ್ರೇನ್ ಕಡಿಮೆಯಾಗಲೂ ನೆರವಾಗುತ್ತದೆ. ಅಲ್ಲದೇ ಸ್ಮರಣಶಕ್ತಿ ಕುಂದುವುದು, ಮರೆಗುಳಿತನ ಕಾಯಿಲೆ ಆವರಿಸುವುದು ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಒಟ್ಟಾರೆಯಾಗಿ ಕಪ್ಪು ದ್ರಾಕ್ಷಿ ಮೆದುಳಿನ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ.

ಹೃದಯದವನ್ನೂ ರಕ್ಷಿಸುತ್ತದೆ: ಇದರಲ್ಲಿರುವ ಪೋಷಕಾಂಶಗಳು ಹೃದಯದ ಮೇಲೆ ಉಂಟಾಗುವ ಹಾನಿಯನ್ನು ತಡೆದು ಹೃದಯದ ಸ್ನಾಯುಗಳನ್ನು ಬಲಪಡಿಸಲು ನೆರವಾಗುತ್ತದೆ. ದೇಹದಲ್ಲಿರುವ ಕೊಬ್ಬಿನ ಮಟ್ಟಗಳನ್ನು ಕಡಿಮೆ ಮಾಡಿ ನಿಯಂತ್ರಣದಲ್ಲಿಡಲು ನೆರವಾಗಿ ತನ್ಮೂಲಕ ಹೃದಯಸಂಬಂಧಿ ರೋಗಗಳಿಂದ ರಕ್ಷಣೆ ಒದಗಿಸುತ್ತದೆ.

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ: ಕಪ್ಪು ದ್ರಾಕ್ಷಿಯಲ್ಲಿರುವ ಕ್ಯಾರೊಟಿನಾಯ್ಡ್ ಪೋಷಕಾಂಶಗಳು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿವೆ. ಕಪ್ಪು ದ್ರಾಕ್ಷಿಯ ನಿಯಮಿತ ಸೇವನೆಯಿಂದ ಕಣ್ಣಿಗೆ ರಕ್ಷಣೆ ಒದಗಿಸಿ ಕುರುಡುತನ ಎದುರಾಗದಂತೆ ತಡೆಯುತ್ತವೆ.

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ: ಕಪ್ಪು ದ್ರಾಕ್ಷಿಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ ಗುಣಲಕ್ಷಣಗಳಿವೆ. ಇದು ಸ್ತನ ಕ್ಯಾನ್ಸರ್ ಸೇರಿದಂತೆ ಎಲ್ಲ ರೀತಿಯ ಕ್ಯಾನ್ಸರ್​ ಅನ್ನು ಎದುರಿಸಲು ಬಹಳ ಪರಿಣಾಮಕಾರಿಯಾಗಿದೆ. ಕಪ್ಪು ದ್ರಾಕ್ಷಿಗಳಲ್ಲಿ ಕಂಡುಬರುವ ಸಂಯುಕ್ತ ಪೋಷಕಾಂಶವಾಗಿದ್ದು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಆರೋಗ್ಯಕರ ಕೂದಲು ಪಡೆಯಲು ನೆರವಾಗುತ್ತದೆ: ಕಪ್ಪು ದ್ರಾಕ್ಷಿಗಳಲ್ಲಿ ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದೆ. ಇದು ವಿಶೇಷವಾಗಿ ನೆತ್ತಿಯ ಚರ್ಮದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೂದಲು ಉದುರುವಿಕೆ, ವಿಭಜಿತ ತುದಿಗಳು ಮತ್ತು ಅಕಾಲಿಕ ಕೂದಲು ನೆರಯುವುದರಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ತುರಿಕೆ ಹಾಗೂ ತಲೆಹೊಟ್ಟು ಉಂಟಾಗದಿರಲು ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ: ಕಪ್ಪು ದ್ರಾಕ್ಷಿಗಳಲ್ಲಿರುವ ವಿಟಮಿನ್ ಕೆ ಮತ್ತು ಎ, ಖನಿಜಗಳು, ಸಕ್ಕರೆ ಮತ್ತು ಸಾವಯವ ಆಮ್ಲಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ ದ್ರಾಕ್ಷಿಯಲ್ಲಿರುವ ಕರಗುವ ನಾರು ಪ್ರಮುಖವಾಗಿ ಮಲಬದ್ದತೆ, ಅಜೀರ್ಣ ಹಾಗೂ ಮೂತ್ರಪಿಂಡದಲ್ಲಿನ ಕಲ್ಲುಗಳ ತೊಂದರೆಯೂ ಶಮನವಾಗುತ್ತದೆ.