ಹಸಿರು ಮೆಣಸಿನಕಾಯಿ ಖಾರವೆನಿಸಿದರೂ ಇದರಿಂದ ಸಿಗುವ ಆರೋಗ್ಯಕರ ಪ್ರಯೋಜನಗಳು ಅಧಿಕ. ಹಸಿಮೆಣಸಿನಕಾಯಿಯಲ್ಲಿ ಅನೇಕ ಪೋಷಕಾಂಶಗಳಿದ್ದು, ಅದು ದೇಹಕ್ಕೆ ಅಗತ್ಯವಾಗಿದೆ. ಇದನ್ನು ಸೇವಿಸುವುದರಿಂದ ಏನು ಲಾಭ ನೋಡೋಣ.
credit: social media
ಹಸಿಮೆಣಸಿನಕಾಯಿಯಲ್ಲಿ ಕಬ್ಬಿಣದಂಶ ಹೇರಳವಾಗಿದ್ದು ರಕ್ತಹೀನತೆ ಸಮಸ್ಯೆ, ಸುಸ್ತು ದೂರ ಮಾಡುತ್ತದೆ
ಮ್ಯಾಂಗನೀಸ್ ಅಧಿಕವಾಗಿರುವುದರಿಂದ ಮೂಳೆ ಮತ್ತು ರಕ್ತನಾಳಗಳ ಆರೋಗ್ಯ ಉತ್ತಮವಾಗಿರುತ್ತದೆ
ಹಸಿಮೆಣಸಿನಕಾಯಿಯಲ್ಲಿ ತಾಮ್ರದ ಪ್ರಮಾಣವಿದ್ದು ಜೀವಕೋಶಗಳನ್ನು ಸಂರಕ್ಷಿಸುತ್ತದೆ
ವಿಟಮಿನ್ ಕೆ ಅಂಶ ಹೇರಳವಾಗಿರುವ ಕಾರಣ ಗಾಯವಾದ ಸಂದರ್ಭದಲ್ಲಿ ರಕ್ತಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ
ವಿಟಮಿನ್ ಬಿ6 ಅಂಶ ಹೇರಳವಾಗಿದ್ದು, ಕೂದಲುಗಳ ಆರೋಗ್ಯ ಸಂರಕ್ಷಣೆಗೆ ಹಸಿಮೆಣಸು ತಿನ್ನಿ
ಹಸಿಮೆಣಸಿನಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ
ಹೀಗಾಗಿ ಆಹಾರದಲ್ಲಿ ಹಸಿಮೆಣಸಿನಕಾಯಿಯನ್ನು ಹೇರಳವಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ