ನಿಮಗೆ ಹೀಗಾಗುತ್ತಿದ್ದರೆ ಹಿಮೋಗ್ಲೋಬಿನ್ ಕಡಿಮೆ ಎಂದರ್ಥ

ಹಿಮೋಗ್ಲೋಬಿನ್ ಎನ್ನುವುದು ನಮ್ಮ ಆರೋಗ್ಯಕ್ಕೆ ಅತೀ ಮುಖ್ಯವಾಗಿದೆ. ರಕ್ತಹೀನತೆಯ ಸಮಸ್ಯೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕುಂಠಿಸಿ ಅನೇಕ ರೋಗಗಳಿಗೆ ಕಾರಣವಾಗಬಹುದು. ಹಿಮೋಗ್ಲೋಬಿನ್ ಕೊರತೆಯ ಲಕ್ಷಣಗಳೇನು ತಿಳಿಯಿರಿ

credit: social media

ಸ್ವಲ್ಪ ದೂರ ನಡೆದಾಡುವಷ್ಟರಲ್ಲಿ ಏದುಸಿರು ಬಿಡುವುದು, ಸುಸ್ತಿನ ಅನುಭವವಾಗವುದು

ಕೈ ಮತ್ತು ಕಾಲು, ಅಂಗಾಲುಗಳಲ್ಲಿ ನಾರ್ಮಲ್ ಬಿಸಿಯ ಬದಲು ತಂಪಗಿನ ಅನುಭವವಾಗುವುದು

ಐಸ್, ಬೆಣಚು ಕಲ್ಲು ಅಥವಾ ಮಣ್ಣು ಸೇವಿಸಬೇಕೆಂಬ ವಿಚಿತ್ರ ಬಯಕೆಯಾಗುವುದು

ಪದೇ ಪದೇ ಕಾಣಿಸಿಕೊಳ್ಳುವ ಶೀತ, ಜ್ವರ, ಕೆಮ್ಮು ಬೇಗನೇ ವಾಸಿಯಾಗದೇ ಇರುವುದು

ಹೃದಯ ಬಡಿತ ಸಾಮಾನ್ಯವಾಗಿರುವ ಬದಲು ಏರುಪೇರಾಗಿರುವುದು

ಆಗಾತ ತಲೆ ನೋವು, ಅಥವಾ ತಲೆ ಸುತ್ತಿ ಬೀಳುವಂತಾಗುವ ಅನುಭವ

ಚರ್ಮ ಎಂದಿನ ಬಣ್ಣದ ಬದಲು ಪೇಲವ ಅಥವಾ ಹಳದಿ ಬಣ್ಣಕ್ಕೆ ತಿರುಗುವುದು