ಸೌಂದರ್ಯದ ಕೇಶರಾಶಿ ರಕ್ಷಣೆಗೆ ಇಲ್ಲಿದೆ ಸರಳ ಪರಿಹಾರ

ಇತ್ತೀಚಿನ ದಿನಗಳಲ್ಲಿ ಕೇಶ ರಾಶಿಯ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ. ಕೂದಲು ಉದುರುವುದು, ಬಹುಬೇಗ ಬಣ್ಣ ಕಳೆದುಕೊಳ್ಳುವುದು, ಒರಟಾದ ವಿನ್ಯಾಸಕ್ಕೆ ತಿರುಗುವುದು, ಸೋಂಕುಗಳ ಕಾರಣದಿಂದ ತುರಿಕೆ ಕಾಣಿಸಿಕೊಳ್ಳುವುದು, ಪದೇ ಪದೇ ಹೊಟ್ಟಿನಿಂದ ಕೂಡಿರುವುದು ಹೀಗೆ ವಿವಿಧ ಸಮಸ್ಯೆಗಳು ಸಾಮಾನ್ಯ ಸಮಸ್ಯೆಗಳಾಗಿ ಗೋಚರಿಸುತ್ತಿವೆ.

photo credit social media

ಇಂತಹ ಸಮಸ್ಯೆಗಳು ಕೇವಲ ವಯಸ್ಕರಲ್ಲಿ ಮಾತ್ರವಲ್ಲ ಅತೀ ಚಿಕ್ಕ ಮಕ್ಕಳು ಸಹ ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು. ಮುಖದ ಸೌಂದರ್ಯ ಅಥವಾ ನಮ್ಮ ವ್ಯಕ್ತಿತ್ವದ ನೋಟಕ್ಕೆ ಒಂದು ಸುಂದರ ಕಳೆಯನ್ನು ನೀಡುವುದು ನಮ್ಮ ಕೇಶರಾಶಿಗಳೆ. ಹಾಗಾಗಿ ಅವುಗಳ ಸಂರಕ್ಷಣೆ ಅಥವಾ ಪಾಲನೆಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು.

ಬೇಸಿಗೆಯ ಉರಿಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರಿಕಿರಿ ಉಂಟಾಗುವುದು ಸಹಜ. ಜೊತೆಗೆ ಆರೋಗ್ಯ ಸಮಸ್ಯೆಗಳು ಸಹ ಕಾಡುತ್ತವೆ. ಇವುಗಳ ಜೊತೆಗೆ ನಮ್ಮ ಸೌಂದರ್ಯ ಹಾಗೂ ಸೌಂದರ್ಯಕ್ಕೆ ಕಾರಣವಾಗುವಂತಹ ಕೇಶರಾಶಿ ಮತ್ತು ಚರ್ಮಗಳ ಆರೋಗ್ಯವು ಸಹ ಹಾಳಾಗುತ್ತವೆ.

ಕೂದಲನ್ನು ಬಿಸಿಲಿಗೆ ಹೆಚ್ಚಾಗಿ ತೆರೆದುಕೊಳ್ಳುವುದರಿಂದಲೂ ಕೂದಲು ಒಣಗುವುದು, ಕವಲು ಒಡೆಯುವುದು, ಬಣ್ಣ ಕಳೆದುಕೊಳ್ಳುತ್ತದೆ. ಬೇಸಿಗೆಯಲ್ಲಿ ಬಹುತೇಕ ಮಂದಿ ಈಜು ಕೊಳದಲ್ಲಿ ಸಮಯವನ್ನು ಕಳೆಯುತ್ತಾರೆ.

ಬಳಸುವ ಶ್ಯಾಂಪುಗಳ ಬಗ್ಗೆ ಕೊಂಚ ಕಾಳಜಿಯನ್ನು ಮಾಡಬೇಕು. ಆದಷ್ಟು ಗಿಡಮೂಲಿಕೆಯಿಂದ ತಯಾರಾದ, ರಾಸಾಯನಿಕ ಪದಾರ್ಥಗಳಿಂದ ಮುಕ್ತವಾದ, ಆಯುರ್ವೇದದ ಶ್ಯಾಂಪುಗಳ ಬಳಕೆ ಮಾಡಿ.

ಎಣ್ಣೆಯುಕ್ತ ಕೇಶರಾಶಿಯವರಿಗೆ ಬೇಸಿಗೆಯಲ್ಲಿ ಅತಿಯಾಗಿ ತೊಂದರೆ ಉಂಟಾಗುವುದು. ಎಣ್ಣೆಯುಕ್ತ ಅಂಶವು ಬಹುಬೇಗ, ಬೆವರು ಹಾಗೂ ಕೊಳೆಯನ್ನು ಆಕರ್ಷಿಸುತ್ತವೆ. ಇವು ಕೂದಲುಗಳ ಬುಡದಲ್ಲಿ ಸಂಗ್ರಹವಾಗುವುದರ ಮೂಲಕ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತವೆ. ಹಾಗಾಗಿ ಬೇಸಿಗೆಯ ಸಮಯದಲ್ಲಿ ಅತಿಯಾಗಿ ಎಣ್ಣೆಯನ್ನು ಬಳಸುವುದು ಅಥವಾ ಎಣ್ಣೆಯಂಶದಿಂದ ಕೂಡಿರುವ ಕಂಡೀಷನರ್ ಬಳಸುವುದನ್ನು ನಿಲ್ಲಿಸಿ.

ಟೀ ಎಲೆಯನ್ನು ನೀರಿನಲ್ಲಿ ಕುದಿಸಿ, ಸೋಸಿ ತಂಪಾಗಿಸಿಕೊಳ್ಳಿ. ಶಾಂಪುವಿನಿಂದ ಸ್ನಾನ ಮಾಡಿದ ನಂತರ ಕೂದಲನ್ನು ಇದರಲ್ಲಿ ನೆನೆಸಿ. ಒಂದು ಮಗ್ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ, ಕೊನೆಯದಾಗಿ ಕೂದಲನ್ನು ಅದರಲ್ಲಿ ನೆನೆಸಬಹುದು. ಹೀಗೆ ಮಾಡುವುದರಿಂದ ಕೂದಲಿನಲ್ಲಿ ಜಿಡ್ಡನಂಶವನ್ನು ಕಡಿಮೆ ಮಾಡಬಹುದು.

ಗೋರಂಟಿ ಅಥವಾ ಮದರಂಗಿಯು ಕೇಶಗಳ ಸಂರಕ್ಷಣೆಯಲ್ಲಿ ಮಹತ್ತರವಾಗಿ ಕಾರ್ಯ ನಿರ್ವಹಿಸುತ್ತದೆ. ತಂಪಾದ ಹಾಗೂ ಆರೋಗ್ಯಕರವಾದ ಗೋರಂಟಿಯ ಚಿಕಿತ್ಸೆಯನ್ನು ಪಡೆಯುವುದರ ಮೂಲಕ ಬೇಸಿಗೆಯ ಬಿಸಿಯಿಂದ ನರಳುವ ಕೇಶರಾಶಿಗಳನ್ನು ಸಂರಕ್ಷಿಸಬಹುದು.