ರೋಡ್‌ಸೈಡ್ ಪಾನಿಪೂರಿ ತಿನ್ನುವವರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್

ರಸ್ತೆ ಬದಿಯ ಜಂಕ್ ಫುಡ್ ಗಳಲ್ಲಿ ಪ್ರಪ್ರಥಮ ಸ್ಥಾನದಲ್ಲಿ ನಿಲ್ಲುವ ಅತ್ಯಂತ ರುಚಿಕರ ಮತ್ತು ಅಷ್ಟೇ ಕಲುಷಿತ ಆಹಾರ ಪದಾರ್ಥ ಇದಾಗಿದೆ. ಈಗಿನ ಕಾಲದಲ್ಲಿ ದೊಡ್ಡವರು, ಚಿಕ್ಕವರು, ಮಹಿಳೆಯರು ಎನ್ನದೆ ಸಂಜೆಯಾಗುತ್ತಲೇ ಬಹುತೇಕ ಮಂದಿ ಮನೆಯ ದಾರಿಯನ್ನು ಹಿಡಿಯುವ ಬದಲು ಪಾನಿಪುರಿ ಮಾರುವವನ ಮುಂದೆ ಪ್ಲೇಟ್ ಹಿಡಿದು ಕ್ಯೂ ನಿಂತಿರುತ್ತಾರೆ.

photo credit social media

ನೀವು ಪಾನಿಪುರಿ ಮಾರುವವರನ್ನು ಸ್ವಲ್ಪ ಹೊತ್ತು ಅಲ್ಲೇ ನಿಂತು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಈ ವಿಚಾರ ನಿಮಗೆ ಅರಿವಿಗೆ ಬರುತ್ತದೆ. ಪಾನಿಪುರಿ ಮಾರುವ ವ್ಯಕ್ತಿ ಆಗಾಗ ತನ್ನ ಕೈ ಒರೆಸಿಕೊಳ್ಳಲು ಒಂದು ಬಟ್ಟೆ ಇಟ್ಟುಕೊಂಡಿರುತ್ತಾನೆ. ಆ ಬಟ್ಟೆಯ ಸ್ವಚ್ಛತೆ ನಿಜಕ್ಕೂ ದೇವರಿಗೇ ಪ್ರೀತಿ.

ಬಟ್ಟೆಯಿಂದ ಕೈ ಒರೆಸಿಕೊಂಡು ಒಂದು ಪಾನಿಪುರಿಯನ್ನು ತೆಗೆದುಕೊಂಡು ಅದನ್ನು ತನ್ನ ಹೆಬ್ಬೆರಳಿನ ಉಗುರಿನಿಂದ ( ಉಗುರು ಸಂಧಿಯಲ್ಲಿ ಕೊಳೆ ಎಷ್ಟಿರುತ್ತದೋ ಯಾರಿಗೆ ಗೊತ್ತು ) ಬ್ರೇಕ್ ಮಾಡಿ ಅದಕ್ಕೆ ಒಂದು ಬಿಂದಿಗೆಯಲ್ಲಿರುವ ಪಾನಿಯನ್ನು ತುಂಬಲು ತನ್ನ ಮೊಣಕೈ ವರೆಗೆ ಮುಳುಗಿಸುತ್ತಾನೆ.

ಆತನ ಕೈ ಬೆವರು ಪಾನಿ ಒಳಗೆ ಬೆರೆಯುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹದ ಮೈ ಬೆವರಿನಲ್ಲಿ ಹೆಚ್ಚು ರೋಗ ಕಾರಕ ಅಂಶಗಳು ಅಡಗಿರುತ್ತವೆ ಎಂದು ಹೇಳುತ್ತಾರೆ ಮತ್ತು ಅದು ನಿಮಗೂ ಗೊತ್ತು. ಹಾಗಾಗಿ ಅತ್ಯಂತ ಸಲೀಸಾಗಿ ಆತನ ದೇಹದ ರೋಗ ರುಜಿನಗಳು ನಿಮಗೆ ವರ್ಗಾವಣೆ ಆಗುತ್ತವೆ.

ಒಂದು ವೇಳೆ ಪಾನಿಪುರಿ ಮಾರುವವನ ಕೈಗಳು ಸ್ವಚ್ಛವಿಲ್ಲದೇ ಇದ್ದರೆ ( ಪಾನಿಪುರಿ ಕೊಳ್ಳುವವರು ಸ್ವಲ್ಪ ಹೊತ್ತು ಯಾರೂ ಬರದೇ ಇರುವಂತಹ ಸಂದರ್ಭದಲ್ಲಿ ಸಿಗರೇಟ್ ಸೇದುತ್ತಾನೆ ಅಥವಾ ಗುಟ್ಕಾ, ಪಾನ್ ಮಸಾಲವನ್ನು ತನ್ನ ಬಲಗೈನ 2 ಬೆರಳುಗಳಲ್ಲಿ ಬಾಯಿಗೆ ತುರುಕಿಕೊಳ್ಳುತ್ತಾನೆ.

ಪಾನಿಪುರಿ ಮಾರುವವರಿಗಿಂತ ಪಾನಿಪುರಿ ಮಾಡಲು ಹಿಟ್ಟು ತಯಾರಿ ಮಾಡಿಕೊಂಡು ಅದನ್ನು ಎಣ್ಣೆಯಲ್ಲಿ ಕರಿಯುವವರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಕೆಲವೊಂದು ಕಡೆ ಪಾನಿಪುರಿಯ ಅಪಾರ ಪ್ರಮಾಣದ ಹಿಟ್ಟು ನಾದಲು ತಮ್ಮ ಕಾಲುಗಳ ಹಿಮ್ಮಡಿಯಿಂದ ತುಳಿಯುತ್ತಾರೆ ಎಂದು ಕೇಳಿ ಬಂದಿದೆ.

ಅಪಾರ ಪ್ರಮಾಣದಲ್ಲಿ ಪಾನಿ ಪುರಿಗಳನ್ನು ಮಾಡಬೇಕಾದ ಅನಿವಾರ್ಯತೆ ಇರುವುದರಿಂದ ಅಷ್ಟು ದಪ್ಪನಾದ ಮೈದಾ ಹಿಟ್ಟು ಕಲಸಲು ಮತ್ತು ಹಿಟ್ಟು ಬಹಳಷ್ಟು ಗಟ್ಟಿ ಇರುವ ಕಾರಣ ಅದನ್ನು ಕೈಗಳಿಂದ ನಾದಲು ಸಾಧ್ಯವೇ ಇಲ್ಲ. ಹಾಗಾಗಿ ಕಾಲುಗಳ ಅವಶ್ಯಕತೆ ಅಗತ್ಯವಾಗುತ್ತದೆ. ( ಕೇವಲ ಪ್ರಮಾಣೀಕೃತ ಆಹಾರ ತಯಾರಿಕಾ ಕಂಪೆನಿಗಳಲ್ಲಿ ಮಾತ್ರ ಸ್ವಚ್ಛತೆಗಳ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ.

ಸಾಮಾನ್ಯವಾಗಿ ಮಧ್ಯಮ ವರ್ಗದ ಜನರಿಗೆ ಹೋಟೆಲ್ ಗೆ ಹೋಗಿ ದುಬಾರಿ ಹಣ ಕೊಟ್ಟು ಪಾನಿಪುರಿ ಸೇವಿಸುವಷ್ಟು ವ್ಯವದಾನ ಇರುವುದಿಲ್ಲ. ಹಾಗಾಗಿ ಎಲ್ಲಾದರೂ ಹೋಗುತ್ತಿರಬೇಕಾದರೆ ರಸ್ತೆ ಬದಿ ತಮ್ಮ ಗಾಡಿ ನಿಲ್ಲಿಸಿ ಅಲ್ಲೇ ಪಕ್ಕದಲ್ಲಿರುವ ಪಾನಿಪುರಿ ಮಾರುವವನ ಬಳಿ ಹೋಗಿ ಒಂದು ಪ್ಲೇಟ್ ಪಾನಿಪುರಿ ಕೊಡಲು ಸರಾಗವಾಗಿ ಕೇಳುತ್ತಾರೆ.

ಪೋಷಕರೇ ಇದನ್ನು ರೂಡಿ ಮಾಡುತ್ತಿದ್ದಾರೆ ಎನ್ನುವುದು ತುಂಬಾ ದುರದೃಷ್ಟಕರ. ಎಲ್ಲೆಲ್ಲೂ ಸೋಂಕು ಹರಡಿರುವ ಈ ಸಮಯದಲ್ಲಿ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು ಇಂತಹ ಬೀದಿ ಬದಿಯ ಆಹಾರವನ್ನು ಸಾಧ್ಯವಿದ್ದಷ್ಟು ದೂರ ಇಡುವುದು ಒಳ್ಳೆಯದು.