ರೋಗ ಮುಕ್ತವಾಗಲು ಮನೆಯಲ್ಲಿ ಈ ಟಿಪ್ಸ್ ಪಾಲಿಸಿ

ಮನೆಯನ್ನು ಶುಚಿಯಾಗಿಟ್ಟುಕೊಳ್ಳುವುದು ನಮ್ಮ ಆರೋಗ್ಯಕರ ಜೀವನದ ದೃಷ್ಟಿಯಿಂದ ಉತ್ತಮ. ಪ್ರತಿನಿತ್ಯ ನಾವು ಮಾಡುವ ಕ್ಲೀನಿಂಗ್ ಕೆಲಸಗಳು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಮನೆ ರೋಗ ಮುಕ್ತವಾಗಬೇಕಾದರೆ ಯಾವೆಲ್ಲಾ ಕ್ಲೀನಿಂಗ್ ಟಿಪ್ಸ್ ಗಳನ್ನು ಅನುಸರಿಸಬೇಕು ನೋಡೋಣ.

credit: social media

ಕಿಚನ್ ನಲ್ಲಿ ಕ್ಲೀನ್ ಮಾಡಲು ಬಳಸುವ ಸ್ಪಾಂಜ್ ಶುಚಿಯಾಗಿರುವಂತೆ ನೋಡಿಕೊಳ್ಳಿ.

ಪಾತ್ರೆ ತೊಳೆಯುವ ಸಿಂಕ್ ನಲ್ಲಿ ನೀರು ತುಂಬಿಕೊಂಡು ಗಲೀಜಾಗದಂತೆ ನೋಡಿಕೊಳ್ಳಿ.

ಆಹಾರ ವಸ್ತುಗಳನ್ನು ಶೇಖರಿಸಿಡಲು ಬಳಸುವ ಫ್ರಿಡ್ಜ್ ಕ್ಲೀನ್ ಆಗಿರಲಿ.

ತರಕಾರಿ ಕಟ್ ಮಾಡಿದ ನಂತರ ತರಕಾರಿ ಮಣೆಯನ್ನು ಶುಚಿಗೊಳಿಸಿ ನೀರು ಆರಿಸಿಡಿ.

ಬಾತ್ ರೂಂ ಮತ್ತು ಟಾಯ್ಲೆಟ್ ಗಬ್ಬು ನಾರದಂತೆ ಶುಚಿಯಾಗಿಟ್ಟುಕೊಳ್ಳಿ.

ಬಟ್ಟೆಯನ್ನು ಶೇಖರಿಸಿಡದೇ ನಿಯಮಿತವಾಗಿ ತೊಳೆದು ಶುಭ್ರವಾಗಿಟ್ಟುಕೊಳ್ಳಿ.

ನೆಲ ಒರೆಸುವಾಗ ಆಂಟಿ ಬ್ಯಾಕ್ಟೀರಿಯಾ ಲಿಕ್ವಿಡ್ ಬಳಸಿ ಒರೆಸಿ.