ಕಬ್ಬಿನ ಜ್ಯೂಸ್ ಮನೆಯಲ್ಲೇ ಮಾಡುವುದು ಹೇಗೆ

ಕಬ್ಬಿನ ಹಾಲಿನ ಜ್ಯೂಸ್ ಸೇವನೆ ಮಾಡಬೇಕೆಂದರೆ ಹಾಲು ಹಿಂಡುವ ಮೆಷಿನ್ ಬೇಕು ಅಂತೇನಿಲ್ಲ. ಸಂಕ್ರಾಂತಿ ಮುಗಿದು ಕಬ್ಬು ಉಳಿದಿದ್ದರೆ ಆರೋಗ್ಯಕರ ಜ್ಯೂಸ್ ಮನೆಯಲ್ಲೇ ಮಾಡಿ.

Photo Credit: Instagram, Facebook

ಕಬ್ಬಿನ ದಂಟುಗಳನ್ನು ಮಿಕ್ಸಿಗೆ ಹಾಕುವಷ್ಟು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ

ಇದನ್ನು ಜ್ಯೂಸ್ ಮಾಡುವ ಜ್ಯಾರ್ ಗೆ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ

ಸೋಸುವ ಸಾಧನ ಇಲ್ಲದೇ ಇದ್ದರೆ ಬಟ್ಟೆಗೆ ಹಾಕಿ ರಸ ಹಿಂಡಬಹುದು

ಇದಕ್ಕೆ ಕೊಂಚ ನಿಂಬೆ ಹಣ್ಣು, ಕಾಳು ಮೆಣಸಿನ ಪೌಡರ್ ಹಾಕಿ

ಸಿಹಿ ಇನ್ನಷ್ಟು ಬೇಕೆನಿಸಿದರೆ ಸ್ವಲ್ಪ ಜೇನು ತುಪ್ಪ ಅಥವಾ ಬೆಲ್ಲ ಹಾಕಿದರೆ ಜ್ಯೂಸ್ ರೆಡಿ

ಕಬ್ಬಿನ ಹಾಲಿನಲ್ಲಿ ಕಬ್ಬಿಣದಂಶ ಹೇರಳವಾಗಿದ್ದು ಆರೋಗ್ಯಕ್ಕೆ ಉತ್ತಮ