ಬೇಸಿಗೆಯಲ್ಲಿ ಕಾಡುವ ಮಲಬದ್ಧತೆಗೆ ಪರಿಹಾರ

ಬೇಸಿಗೆ ಬಂದಾಗ ದೇಹದ ಉಷ್ಣತೆ ಹೆಚ್ಚಾಗಿ ಅನೇಕ ರೋಗಗಳು ಬರುತ್ತವೆ. ಬೇಸಿಗೆಯಲ್ಲಿ ಕಾಡುವ ಸಮಸ್ಯೆಗಳಲ್ಲಿ ಮಲಬದ್ಧತೆಯೂ ಒಂದು. ಹಾಗಿದ್ದರೆ ಬೇಸಿಗೆಯಲ್ಲಿ ಕಾಡುವ ಮಲಬದ್ಧತೆ ಸಮಸ್ಯೆ ದೂರಮಾಡಲು ಏನು ಮಾಡಬೇಕು ನೋಡಿ.

credit: social media

ಬೇಸಿಗೆಯಲ್ಲಿ ದೇಹ ನಿರ್ಜಲೀಕರಣಕ್ಕೊಳಗಾದಾಗ ಮಲಬದ್ಧತೆ ಸಮಸ್ಯೆ ಹೆಚ್ಚಾಗುವುದು.

ಹೀಗಾಗಿ ಬೇಸಿಗೆಯಲ್ಲಾದರೂ ಕನಿಷ್ಠ 2 ಲೀ. ನೀರನ್ನಾದರೂ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ

ರಾತ್ರಿ ಮಲಗುವ ಮುನ್ನ ಅಂಜೂರನ್ನು ನೆನೆ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ

ಕಪ್ಪು ಒಣ ದ್ರಾಕ್ಷಿಯನ್ನು ರಾತ್ರಿ ನೆನೆ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ

ಸೋಂಪು ಕಾಳಿನ ನೀರನ್ನು ಆಗಾಗ್ಗ ಸೇವಿಸುತ್ತಿದ್ದರೆ ದೇಹ ತಂಪಾಗಿ ಮಲಬದ್ಧತೆ ನಿವಾರಣೆಯಾಗುತ್ತದೆ

ಬಾರ್ಲಿ ನೀರು ಅಥವಾ ಗಂಜಿ ತಂಪು ಗುಣ ಹೊಂದಿದ್ದು ಆಗಾಗ ಸೇವಿಸುತ್ತಿದ್ದರೆ ಉತ್ತಮ

ಎಳ್ಳು ಜ್ಯೂಸ್ ಅಥವಾ ಎಳ್ಳು ನೆನೆ ಹಾಕಿದ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ