ಶಾಲೆಗೆ ಹೋಗುವ ಮಕ್ಕಳ ತಲೆಕೂದಲಿನಲ್ಲಿ ಹೇನು ಕಂಡುಬರುವುದು ಸಾಮಾನ್ಯ. ಕೂದಲು ಸರಿಯಾಗಿ ಶುಚಿ ಮಾಡಿಕೊಳ್ಳದೇ ಇದ್ದಾಗ ಸೂಕ್ಷ್ಮ ಜೀವಿ ಹೇನು ತುಂಬಬಹುದು. ಹೇನು ನಿವಾರಿಸಲು ಮನೆ ಮದ್ದುಗಳು ಏನೇನಿವೆ ನೋಡೋಣ.
Photo Credit: Social Media
ತಲೆಕೂದಲನ್ನು ವಾರಕ್ಕೆ ಎರಡು ಬಾರಿಯಾದರೂ ಸ್ನಾನ ಮಾಡಿ ಶುಚಿಯಾಗಿಟ್ಟುಕೊಳ್ಳಿ
ಸ್ನಾನವಾದ ತಕ್ಷಣ ಒದ್ದೆಕೂದಲನ್ನು ಕಟ್ಟಿಕೊಂಡರೆ ಹೇನು ಬರುವ ಸಾಧ್ಯತೆಯಿರುವುದರಿಂದ ಚೆನ್ನಾಗಿ ಒಣಗಿಸಿ
ತಲೆಕೂದಲಿನಲ್ಲಿ ಹೇನುಗಳಾಗಿದ್ದರೆ ಹುಳಿ ಮಜ್ಜಿಗೆಯನ್ನು ಬಳಸಿ ಕೂದಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ
ಬೇವಿನ ಸೊಪ್ಪು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಆ ನೀರಿನಿಂದ ತಲೆ ತೊಳೆದುಕೊಳ್ಳಿ
ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ರಸ ತೆಗೆದು ಅದಕ್ಕೆ ನಿಂಬೆ ರಸ ಸೇರಿಸಿ ಕೂದಲುಗಳಿಗೆ ಹಚ್ಚಿ ನಂತರ ತೊಳೆದುಕೊಳ್ಳಿ
ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಗೆ ಅಡುಗೆ ಸೋಡಾ ಮಿಶ್ರಣ ಮಾಡಿ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆದುಕೊಳ್ಳಿ
ದೇವರ ಪೂಜೆಗೆ ಬಳಸುವ ಕರ್ಪೂರವನ್ನು ಪುಡಿ ಮಾಡಿ ಕೊಬ್ಬರಿ ಎಣ್ಣೆಗೆ ಹಾಕಿ ತಲೆಗೆ ಹಚ್ಚಿಕೊಳ್ಳಿ