ಮುಟ್ಟಿನ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಅತಿಯಾದ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಇದರಿಂದಾಗಿ ದೈನಂದಿನ ಕೆಲಸಕ್ಕೆ ತೊಂದರೆಯಾಗುತ್ತದೆ. ಮುಟ್ಟಿನ ನೋವು ಕಡಿಮೆ ಮಾಡಲು ಸಿಂಪಲ್ ಮನೆ ಮದ್ದು ಇಲ್ಲಿದೆ.
Photo Credit: Social Media
ಸಬ್ಸಿಗೆ ಸೊಪ್ಪಿನಲ್ಲಿ ನೋವು ನಿವಾರಕ ಗುಣವಿದ್ದು, ಮುಟ್ಟಿನ ನೋವಿಗೆ ಇದನ್ನು ಸೇವಿಸಿ
ಅರಸಿನದಲ್ಲಿ ಉರಿಯೂತ ಮತ್ತು ನೋವು ನಿವಾರಕ ಗುಣವಿದ್ದು ಇದರ ನೀರು ಸೇವಿಸಿ
ಜೀರಿಗೆ ಕಾಳನ್ನು ಚೆನ್ನಾಗಿ ತೊಳೆದುಕೊಂಡು ಕಷಾಯ ಮಾಡಿಕೊಂಡು ಸೇವಿಸಿ
ನೋವು ನಿವಾರಕವಾಗಿ ಕೆಲಸ ಮಾಡುವ ಚಕ್ಕೆಯ ನೀರನ್ನು ಸೇವಿಸಿ
ಶುಂಠಿಯನ್ನು ತುರಿದುಕೊಂಡು ನೀರಿಗೆ ಹಾಕಿ ಕುದಿಸಿ 2-3 ಬಾರಿ ಸೇವಿಸಿ
ಮುಟ್ಟಿನ ಸಂದರ್ಭದಲ್ಲಿ ಕೆಫೈನ್ ಅಂಶವಿರುವ ಆಹಾರ, ಪಾನೀಯ ಸೇವಿಸಬೇಡಿ
ಎಳೆನೀರಿಗೆ ಗಸಗಸೆ ಕಾಳು ಹಾಕಿಕೊಂಡು ಸೇವಿಸಿದಲ್ಲಿ ನೋವು ನಿವಾರಣೆಯಾಗುವುದು