ಸಂಧಿವಾತಕ್ಕೆ ಮನೆ ಮದ್ದುಗಳು

ಇಂದಿನ ದಿನ ವಯಸ್ಕರು ಮಾತ್ರವಲ್ಲ, ಚಿಕ್ಕ ವಯಸ್ಸಿನವರಲ್ಲೂ ಸಂಧಿವಾತ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಕಾರಣಗಳು ಅನೇಕ ಇರಬಹುದು. ಆದರೆ ಸಂಧಿವಾತಕ್ಕೆ ಔಷಧಿಗಳನ್ನು ತಿಂದು ಬೇಸತ್ತಿದ್ದರೆ ಮನೆಯಲ್ಲಿಯೇ ಮಾಡಬಹುದಾದ ಔಷಧಿಗಳು ಏನೆಂದು ನೋಡೋಣ.

credit: social media

ಎಕ್ಕದ ಸೊಪ್ಪನ್ನು ಚೆನ್ನಾಗಿ ತೊಳೆದು ಬಾಡಿಸಿ ನೋವಿರುವ ಜಾಗಕ್ಕೆ ಶಾಖ ನೀಡಿ

ಮೆಂತೆ ಸೊಪ್ಪನ್ನು ಹಬೆಯಲ್ಲಿ ಬೇಯಿಸಿ ತಿನ್ನುವುದರಿಂದ ಸಂಧಿವಾತದ ನೋವು ಕಡಿಮೆಯಾಗುತ್ತದೆ

ಅಮೃತ ಬಳ್ಳಿಯ ಸೊಪ್ಪು ಅಥವಾ ಕಾಂಡವನ್ನು ಒಣಗಿಸಿ ಚೂರ್ಣ ಮಾಡಿಕೊಂಡು ಕಷಾಯ ಮಾಡಿ

ಕ್ಯಾಲ್ಶಿಯಂ ಅಂಶವಿರುವ ಮೊಸರಿಗೆ ಅರಸಿನ ಪುಡಿ ಸೇರಿಸಿಕೊಂಡು ಪ್ರತಿನಿತ್ಯ ಸೇವಿಸಿ

ಸಂಧಿವಾತವಿರುವವರು ತಪ್ಪದೇ ಪ್ರತಿನಿತ್ಯ ಮಾವಿನ ಹಣ್ಣನ್ನು ಹೇರಳವಾಗಿ ಸೇವಿಸಿದರೆ ಉತ್ತಮ

ದೈನಂದಿನ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಉತ್ತಮ

ಕಬ್ಬಿಣದಂಶ ಹೇರಳವಾಗಿರುವ ನುಗ್ಗೆಕಾಯಿಯನ್ನು ನಿಯಮಿತವಾಗಿ ಸೇವಿಸಿದರೆ ಉತ್ತಮ