ಅಡುಗೆ ಮಾಡುವಾಗ ಕೈ ಸುಟ್ಟುಕೊಂಡರೆ ಹೀಗೆ ಮಾಡಿ

ಸಾಮಾನ್ಯವಾಗಿ ಅಡುಗೆ ಮಾಡುವಾಗ ಅಥವಾ ಇನ್ಯಾವುದೇ ಬಿಸಿ ಪದಾರ್ಥವನ್ನು ಮುಟ್ಟಿದಾಗ ಕೈಯಲ್ಲಿ ಬೊಬ್ಬೆಗಳಾಗಿ ಸುಟ್ಟ ಗಾಯಗಳಾಗುತ್ತವೆ. ಇದು ಅತೀವ ಉರಿ ಉಂಟು ಮಾಡುತ್ತದೆ. ಇದಕ್ಕೆ ಮನೆ ಮದ್ದುಗಳೇನು ನೋಡಿ.

credit: social media

ಬಿಸಿ ತಾಕಿ ಸುಟ್ಟ ಗಾಯವಾದ ತಕ್ಷಣ ಸ್ವಲ್ಪ ಹೊತ್ತು ತಣ್ಣೀರಿನಲ್ಲಿ ಆ ಭಾಗವನ್ನು ಅದ್ದಿಡಿ ಅಥವಾ ತೊಳೆದುಕೊಳ್ಳಿ

ತಣ್ಣೀರಿನಲ್ಲಿ ಅದ್ದಿಡುವುದರಿಂದ ಉರಿ ನಿಲ್ಲದು ಹೀಗಾಗಿ ಹದ ಬಿಸಿ ನೀರಿನಲ್ಲಿ ಕೆಲವು ಕ್ಷಣ ಸುಟ್ಟ ಜಾಗವನ್ನು ಇಡಿ

ಸುಟ್ಟ ಗಾಯವಾದ ಭಾಗಕ್ಕೆ ಜೇನು ತುಪ್ಪವನ್ನು ಹಚ್ಚಿಕೊಳ್ಳುವುದರಿಂದ ಉರಿ ಮತ್ತು ಬೊಬ್ಬೆಯಾಗದು

ಅಲ್ಯೂವೀರಾ ತಂಪು ಗುಣ ಹೊಂದಿದ್ದು ಸುಟ್ಟ ಗಾಯವಾದ ಜಾಗಕ್ಕೆ ಜೆಲ್ ಹಚ್ಚಿಕೊಂಡು ನೋಡಿ

ಗಾಯವಾದ ಭಾಗಕ್ಕೆ ಯಾವುದೇ ಕಾರಣಕ್ಕೂ ಬ್ಯಾಂಡೇಜ್ ಮಾಡಬೇಡಿ, ಇದರಿಂದ ಕೀವು ಉಂಟಾಗಬಹುದು

ನೆನಪಿಡಿ, ಯಾವುದೇ ಮನೆ ಮದ್ದುಗಳನ್ನು ಪ್ರಯೋಗಿಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ.