ರಾತ್ರಿ ಮಲಗಿದಾಗ ಅಂಗಾಲು ಉರಿ ಅಥವಾ ಬೆಂಕಿ ಬಂದಂತಹ ಅನುಭವವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಇದಕ್ಕೆ ಇಂದಿನ ಜೀವನ ಶೈಲಿಯೂ ಕಾರಣವಾಗಬಹುದು. ಅಂಗಾಲು ಉರಿ ಶಮನಕ್ಕೆ ಮಾಡಬಹುದಾದ ಮನೆ ಮದ್ದುಗಳು ಏನೆಂದು ನೋಡೋಣ.
credit: social media
ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹರಳೆಣ್ಣೆ ಹಚ್ಚಿಕೊಂಡು ಮಲಗಿ. ಇದು ದೇಹಕ್ಕೆ ತಂಪು
ರಾತ್ರಿ ಮಲಗುವ ಮುನ್ನ ಅಂಗಾಲುಗಳಿಗೆ ಅರಶಿಣ ಮತ್ತು ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿ ಹಚ್ಚಿಕೊಳ್ಳಿ
ಹಾಗಲಕಾಯಿ ಬಳ್ಳಿಯ ಎಲೆಗಳನ್ನು ಜಜ್ಜಿ ರಸ ಮಾಡಿಕೊಂಡು ಇದನ್ನು ಕಾಲುಗಳಿಗೆ ಹಚ್ಚಿಕೊಳ್ಳಿ.
ಒಂದು ಟಬ್ ಗೆ ಉಪ್ಪು ನೀರು ಹಾಕಿಕೊಂಡು ಕೆಲವು ಕಾಲ ಕಾಲು ಅದರಲ್ಲಿ ಅದ್ದಿಡಿ
ತಂಪು ಗುಣವಿರುವ ಸೋರೆಕಾಯಿಯ ರಸವನ್ನು ಅಂಗಾಲುಗಳಿಗೆ ಹಚ್ಚಿಕೊಂಡರೆ ಉತ್ತಮ.
ಆದಷ್ಟು ಮಸಾಲೆಯುಕ್ತ ಆಹಾರಗಳನ್ನು ಕಡಿಮೆ ಮಾಡಿ ಕಾಲು ಉರಿಯನ್ನು ನಿಯಂತ್ರಿಸಬಹುದು.