ಸಡನ್ ಆಗಿ ಕುತ್ತಿಗೆ ನೋವಾದರೆ ಏನು ಮಾಡಬೇಕು

ಕೆಲವೊಮ್ಮೆ ನಾವು ಕುಳಿತುಕೊಳ್ಳುವ ಅಥವಾ ಕೆಲಸ ಮಾಡುವ ಭಂಗಿಯಿಂದಲೋ ಸಡನ್ ಆಗಿ ಕುತ್ತಿಗೆಯಲ್ಲಿ ಛಳ್ ಎಂದು ನೋವಾಗಿ ಬಳಿಕ ಅತ್ತಿತ್ತ ಅಲುಗಾಡಿಸಲೂ ಸಾಧ್ಯವಾಗದ ಪರಿಸ್ಥಿತಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: Instagram, AI image

ಬಹಳ ಹೊತ್ತು ಲ್ಯಾಪ್ ಟಾಪ್, ಮೊಬೈಲ್ ನಂತಹ ವಸ್ತುಗಳನ್ನು ನೋಡುತ್ತಿದ್ದರೆ ಕುತ್ತಿಗೆ ನೋವು ಬರುತ್ತದೆ

ಮಲಗಿ ಏಳುವಾಗ ಕುತ್ತಿಗೆ ನೋವು ಬರುತ್ತಿದೆ ಎಂದಾದರೆ ನಿಮ್ಮ ಹಾಸಿಗೆ ಅಥವಾ ತಲೆದಿಂಬು ಬದಲಾಯಿಸಿ

ಲ್ಯಾಪ್ ಟಾಪ್ ಮುಂದೆ ಕೆಲಸ ಮಾಡಬೇಕೆಂದರೆ ನಡು ನಡುವೆ ಬ್ರೇಕ್ ಕೊಡಿ

ಕುತ್ತಿಗೆ ಹಿಡಿದುಕೊಂಡಂತಾಗಿದ್ದರೆ ಬಲ ಮತ್ತು ಎಡ, ಮೇಲೆ ಮತ್ತು ಕೆಳಗೆ ಕತ್ತು ಆಡಿಸಿ ವ್ಯಾಯಾಮ ಮಾಡಿ

ಕುತ್ತಿಗೆ ನೋವು ಬಂದಾಗ ತಲೆಯ ಹಿಂಭಾಗಕ್ಕೆ ಮೃದುವಾಗಿ ಮಸಾಜ್ ಮಾಡಿಸಿಕೊಳ್ಳಿ

ಕುತ್ತಿಗೆ ಉಳುಕಿದಂತಾಗಿದ್ದರೆ ಅತಿಯಾಗಿ ಮಸಾಜ್ ಮಾಡುವುದೂ ಒಳ್ಳೆಯದಲ್ಲ

ಬಿಸಿ ಅಥವಾ ತಂಪಿನ ಶೇಖ ನೀಡಿ ಅಂಗಾತ ಮಲಗಿ ಕುತ್ತಿಗೆಗೆ ವಿಶ್ರಾಂತಿ ನೀಡುವುದು ಉತ್ತಮ