ಕಟ್ಟಿದ ಮೂಗು ತೆರೆಯಲು ಮನೆ ಮದ್ದು ಮಾಡಿ

ಮಳೆಗಾಲ ಬಂತೆಂದರೆ ಶೀತ, ಸೈನಸ್, ಮೂಗು ಕಟ್ಟುವ ಸಮಸ್ಯೆ ಸಾಮಾನ್ಯ. ಕಟ್ಟಿದ ಮೂಗಿನ ಸಮಸ್ಯೆ ಚಿಕ್ಕದಾದರೂ ಇದರಿಂದ ಮಲಗಲೂ ಆಗದೇ ಒದ್ದಾಡಬೇಕಾಗುತ್ತದೆ. ಕಟ್ಟಿದ ಮೂಗು ತೆರೆದು ಉಸಿರಾಟ ಸರಾಗವಾಗಲು ಈ ಮನೆ ಮದ್ದುಗಳನ್ನು ಮಾಡಿ.

Photo Credit: Social Media

ಸಾಮಾನ್ಯ ಶೀತ, ಅಲರ್ಜಿ ಸಮಸ್ಯೆಯಿಂದಾಗಿ ಮೂಗು ಕಟ್ಟಿಕೊಂಡು ಉಸಿರಾಡಲು ಸಮಸ್ಯೆಯಾಗಬಹುದು

ಸ್ಟೀಮ್ ತೆಗೆದುಕೊಳ್ಳುವುದು ಕಟ್ಟಿದ ಮೂಗು ತೆರೆದುಕೊಳ್ಳಲು ಬೆಸ್ಟ್ ಮತ್ತು ಸುಲಭ ಪರಿಹಾರ

ಮೂಗಿನ ಮೇಲೆ ಬಿಸಿ ನೀರಿನ ಬಟ್ಟೆ ಅಥವಾ ಬಿಸಿಯ ಒತ್ತಡ ನೀಡುತ್ತಿದ್ದರೆ ಮೂಗು ತೆರೆದುಕೊಳ್ಳುತ್ತದೆ

ಉರಿಯೂತ ನಿವಾರಕ ಶುಂಠಿಯನ್ನು ಸೇವಿಸುತ್ತಿದ್ದರೆ ಕಟ್ಟಿದ ಮೂಗಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ

ಮೂಗು ಕಟ್ಟುವ ಸಮಸ್ಯೆ ಇರುವವರು ಸಾಕಷ್ಟು ಜೇನು ತುಪ್ಪ ಸೇವಿಸಿದರೆ ಪರಿಹಾರ ಸಿಗುವುದು

ಆಂಟಿ ಆಕ್ಸಿಡೆಂಟ್ ಗಳಿರುವ ಬೆಳ್ಳುಳ್ಳಿಯನ್ನು ಇಂತಹ ಸಂದರ್ಭದಲ್ಲಿ ಸಾಕಷ್ಟು ಸೇವಿಸಿ

ವಿಟಮಿನ್ ಸಿ ಅಂಶ ಹೇರಳವಾಗಿರುವ ಹುಳಿ ಅಂಶವಿರುವ ಹಣ್ಣುಗಳನ್ನು ಸೇವಿಸಿ