ಬೇಸಿಗೆಯ ಸ್ಕಿನ್ ಅಲರ್ಜಿಗೆ ಮನೆ ಮದ್ದು

ಬೇಸಿಗೆ ಬಂತೆಂದರೆ ಸಾಕು ಚರ್ಮ ಸಂರಕ್ಷಣೆಯೇ ದೊಡ್ಡ ತಲೆನೋವು. ಬಿಸಿಲಿನ ಬೇಗೆಗೆ ದೇಹದಲ್ಲಿ ಕೆಂಪು ದದ್ದುಗಳು, ಇಲ್ಲವೇ ಬೆವರು ಸಾಲೆಯಂತಹ ಅಲರ್ಜಿ ರೋಗಗಳು ಕಂಡುಬರುವುದು ಸಹಜ. ಬೇಸಿಗೆಯ ಸ್ಕಿನ್ ಅಲರ್ಜಿಗೆ ಮನೆ ಮದ್ದುಗಳು ಏನೆಂದು ನೋಡೋಣ.

credit: social media

ಅತಿಯಾದ ಬಿಸಿಲಿನ ಬೇಗೆಗೆ ಚರ್ಮದಲ್ಲಿ ದದ್ದುಗಳು ಅಥವಾ ಅಲರ್ಜಿ ಕಂಡುಬರಬಹುದು.

ಬೇಸಿಗೆಯಲ್ಲಿ ದೇಹ ನೈರ್ಮಲ್ಯ ಕಾಪಾಡುವುದರ ಬಗ್ಗೆ ಗಮನ ಕೊಡಬೇಕು.

ಬೇಸಿಗೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಸ್ನಾನ ಮಾಡುವುದನ್ನು ಮರೆಯಬೇಡಿ.

ಹೆಚ್ಚು ಬೆವರು ಬಟ್ಟೆಯ ಬದಲು ಮೃದುವಾದ ಕಾಟನ್ ಬಟ್ಟೆ ಧರಿಸಿದರೆ ಉತ್ತಮ

ಕಾಲುಗಳಿಗೆ ತೆರೆದ ಚಪ್ಪಲಿ ಅಥವಾ ಗಾಳಿ ಹೋಗುವಂತಹ ಬೂಟುಗಳನ್ನು ಧರಿಸಿ

ಮನೆಯಲ್ಲಿ ಪ್ರತಿಯೊಬ್ಬರೂ ಪ್ರತ್ಯೇಕ ಸೋಪು ಬಳಸುವುದನ್ನು ಅಭ್ಯಾಸ ಮಾಡಿ

ಅತಿಯಾದ ಬಿಸಿ ನೀರಿನ ಸ್ನಾನದ ಬದಲು ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿ.