ಹೊಟ್ಟೆಯಲ್ಲಿ ಅಸಿಡಿಕ್ ಅಂಶ ಹೆಚ್ಚಾದಾಗ ಹೊಟ್ಟೆ ಹುಣ್ಣಿನ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ವೈದ್ಯರು ಆಂಟಿ ಬಯೋಟಿಕ್ ಔಷಧ ನೀಡಬಹುದು. ಆದರೆ ಅದರ ಹೊರತಾಗಿ ಆಹಾರದಲ್ಲಿ ನಾವು ಹೊಟ್ಟೆ ಹುಣ್ಣಿಗೆ ಮಾಡಬಹುದಾದ ಮನೆಮದ್ದುಗಳೇನು ನೋಡಿ.
Photo Credit: Social Media
ಹೊಟ್ಟೆ ಹುಣ್ಣಿನ ಸಮಸ್ಯೆಯಿದ್ದಾಗ ಬ್ರಾಕೊಲಿ, ಆಪಲ್, ಕಪ್ಪು ದ್ರಾಕ್ಷಿ ಹಣ್ಣನ್ನು ಸಾಕಷ್ಟು ಸೇವನೆ ಮಾಡಿ
ಹೊಟ್ಟೆ ಹುಣ್ಣಿನ ಸಮಸ್ಯೆಯಿದ್ದಾಗ ಪ್ರೊಬಯೋಟಿಕ್ಸ್ ಗಳಿರುವ ಮಜ್ಜಿಗೆಯನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ
ಆಂಟಿ ಆಕ್ಸಿಡೆಂಟ್ ಹೇರಳವಾಗಿರುವ ಜೇನು ತುಪ್ಪವನ್ನು ಸಾಕಷ್ಟು ಪ್ರಮಾಣದಲ್ಲಿ ಸೇವನೆ ಮಾಡಬಹುದು
ಬ್ಯಾಕ್ಟೀರಿಯಾ ಬೆಳವಣಿಗೆ ತಡೆಯಲು ಬೆಳ್ಳುಳ್ಳಿಯನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಉತ್ತಮ
ಸ್ಟ್ರಾಬೆರಿ, ಬ್ಲೂ ಬೆರಿ, ಬ್ಲ್ಯಾಕ್ ಬೆರಿಯಂತಹ ಹಣ್ಣುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ
ಧಾನ್ಯಗಳ ಪೈಕಿ ಫ್ಲ್ಯಾಕ್ ಸೀಡ್ ಗಳನ್ನು ಸೇವಿಸುವುದು ಹೊಟ್ಟೆ ಹುಣ್ಣಿನ ಸಮಸ್ಯೆಗೆ ಪರಿಹಾರ ನೀಡಬಲ್ಲದು
ನೆನಪಿರಲಿ, ಯಾವುದೇ ಮನೆ ಮದ್ದು ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ.