ಸುಟ್ಟರೆ ಮನೆ ಮದ್ದು ಏನೆಂದು ನೋಡಿ.

ಬಿಸಿ ಕಾಫಿ, ಟೀ ಅಥವಾ ಯಾವುದೇ ಆಹಾರ ವಸ್ತು ಸೇವಿಸುವಾಗ ಕೆಲವೊಮ್ಮೆ ನಾಲಿಗೆ ಸುಟ್ಟು ಫಜೀತಿ ಅನುಭವಿಸುತ್ತೇವೆ. ಇದರಿಂದ ನಾಲಿಗೆ ಉರಿಯಾಗುವುದಲ್ಲದೆ, ಕೆಲವು ಸಮಯ ನಮಗೆ ಆ ಭಾಗದಲ್ಲಿ ಆಹಾರ ರುಚಿಯೇ ಗೊತ್ತಾಗುವುದಿಲ್ಲ. ನಾಲಿಗೆ ಸುಟ್ಟರೆ ಮನೆ ಮದ್ದು ಏನೆಂದು ನೋಡಿ.

credit: social media

ನಾಲಿಗೆ ಸುಟ್ಟ ಜಾಗಕ್ಕೆ ತಕ್ಷಣವೇ ಐಸ್ ಕ್ಯೂಬ್ ಇಡಿ ಅಥವಾ ತಣ್ಣನೆಯ ಪಾನೀಯ ಸೇವಿಸಿ.

ಅಲ್ಯುವೀರಾ ಎಲೆಯಿಂದ ರಸ ತೆಗೆದು ಜ್ಯೂಸ್ ನಂತೆ ಮಾಡಿ ಕುಡಿಯಿರಿ.

ತಕ್ಷಣವೇ ಕೊಬ್ಬರಿ ಅಥವಾ ತೆಂಗಿನ ಕಾಯಿ ಚೂರುಗಳನ್ನು ತಿನ್ನುವುದು ಉತ್ತಮ

ದೇಹಕ್ಕೂ ತಂಪು ನೀಡುವ ಕೊತ್ತಂಬರಿ ಬೀಜಗಳನ್ನು ನೆನೆಸಿ ಅದರ ನೀರು ಸೇವಿಸಿ

ತಣ್ಣನೆಯ ನೀರಿಗೆ ಸಕ್ಕರೆ ಹಾಕಿಕೊಂಡು ಕುಡಿದರೆ ನಾಲಿಗೆ ಉರಿ ಕಡಿಮೆಯಾಗುತ್ತದೆ

ಸುಟ್ಟ ಜಾಗಕ್ಕೆ ಜೇನು ತುಪ್ಪ ಹಚ್ಚುವುದರಿಂದ ಉರಿ ಕಡಿಮೆಯಾಗುತ್ತದೆ

ಕೆಲವು ಸಮಯ ಖಾರ, ಮಸಾಲಾಯುಕ್ತ ಆಹಾರಗಳನ್ನು ಸೇವಿಸದೇ ಇದ್ದರೆ ಉತ್ತಮ