ಜೇನುತುಪ್ಪ ಯಾವುದೇ ಕಾರಣಕ್ಕೂ ಇವುಗಳೊಂದಿಗೆ ಸೇವಿಸಬಾರದು

ಆಯುರ್ವೇದ ಶಾಸ್ತ್ರದ ಪ್ರಕಾರ ಯಾವುದೇ ಕಾರಣಕ್ಕೂ ಜೇನುತುಪ್ಪದ ಜೊತೆ ಹಸುವಿನ ತುಪ್ಪ ವನ್ನು ಮಿಶ್ರಣ ಮಾಡಿ ಸೇವಿಸಲು ಮುಂದಾಗಬಾರದು. ಆರೋಗ್ಯದ ವಿಚಾರದಲ್ಲಿ ಇದಕ್ಕಿಂತ ಕೆಟ್ಟ ಕಾಂಬಿನೇಶನ್ ಮತ್ತೊಂದಿಲ್ಲ. ಈಗಲೂ ಸಹ ಬಹಳಷ್ಟು ಆಧುನಿಕ ಅಡುಗೆ ಶೈಲಿಯಲ್ಲಿ ಜೇನು ತುಪ್ಪದ ಜೊತೆ ಬೆಣ್ಣೆ ಅಥವಾ ಸಾಧಾರಣ ಹಸುವಿನ ತುಪ್ಪವನ್ನು ಬಳಕೆ ಮಾಡಿ ಆಹಾರ ಪದಾರ್ಥಗಳನ್ನು ತಯಾರು ಮಾಡುತ್ತಾರೆ.

photo credit social media

ಅಪ್ಪಿತಪ್ಪಿಯೂ ಯಾವುದೇ ಕಾರಣಕ್ಕೂ ಜೇನುತುಪ್ಪ ಮತ್ತು ಸಾಧಾರಣ ಹಸುವಿನ ತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಬಾರದು. ಆಯುರ್ವೇದ ತಜ್ಞರು ಈ ಬಗ್ಗೆ ಎಚ್ಚರಿಕೆ ಕೊಡುತ್ತಾರೆ. ಹೆಚ್ಚಾಗಿ ಜೇನು ತುಪ್ಪ ತಿಂದ್ರೆ ಹೀಗೆಲ್ಲಾ ಆಗುತ್ತದೆ ನೋಡಿ!

ನಿಮ್ಮಲ್ಲಿ ಯಾರಿಗಾದರೂ ಜೇನುತುಪ್ಪದ ಜೊತೆ ಮೂಲಂಗಿ ಯಾವುದಾದರೂ ರೂಪದಲ್ಲಿ ಮಿಶ್ರಣಮಾಡಿ ಸೇವನೆ ಮಾಡಬೇಕು ಎನ್ನುವ ಬಯಕೆ ಇದ್ದರೆ ಅದನ್ನು ಈಗಲೇ ಬಿಟ್ಟು ಬಿಡಿ.

ಸಾಕಷ್ಟು ಜನರಿಗೆ ಇಂದಿಗೂ ಸಹ ಇದೊಂದು ಅಭ್ಯಾಸವಿದೆ. ಅದೇನೆಂದರೆ ಮಾಂಸಾಹಾರ ತಯಾರು ಮಾಡುವ ಜೊತೆಗೆ ಅಥವಾ ಆ ಸಂದರ್ಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಜೇನು ತುಪ್ಪವನ್ನು ಸಹ ಸೇರಿಸಿ ತಿಂದರೆ ರುಚಿ ಹೆಚ್ಚಾಗಿರುತ್ತದೆ ಎನ್ನುವ ಆಲೋಚನೆ ಇರುತ್ತದೆ.

ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಏಕೆಂದರೆ ಮಾಂಸಾಹಾರ ಮತ್ತು ಜೇನುತುಪ್ಪ ದೇಹಕ್ಕೆ ಉಷ್ಣ ಪ್ರಭಾವವನ್ನು ಬೀರುವಂತಹ ಆಹಾರ ಪದಾರ್ಥಗಳು. ಹಾಗಾಗಿ ದೇಹದ ತಾಪಮಾನ ಇದ್ದಕ್ಕಿದ್ದಂತೆ ಏರಿಕೆ ಆಗಬಹುದು. ಇದರಿಂದ ಒಳಭಾಗದಲ್ಲಿ ಅಲ್ಸರ್ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.

ನಾವು ತಯಾರು ಮಾಡುವ ಚಹಾ ಸಿಹಿಯಿಂದ ಕೂಡಿರಬೇಕು ನಿಜ. ಹಾಗೆಂದು ಚಹಾ ಬಿಸಿಯಿರುವಾಗ ಯಾವುದೇ ಕಾರಣಕ್ಕೂ ನೈಸರ್ಗಿಕವಾದ ಸಿಹಿ ರೂಪ ಬರಲಿ ಎನ್ನುವ ಮನಸ್ಥಿತಿಯಿಂದ ಜೇನು ತುಪ್ಪವನ್ನು ಬೆರೆಸಲು ಹೋಗಬಾರದು.

ಸಾಧಾರಣ ನೀರಿಗೆ ಜೇನು ತುಪ್ಪವನ್ನು ಹಾಕಿ ಕುಡಿಯಬೇಕು ಎನ್ನುವ ಮನಸ್ಥಿತಿ ಇದ್ದರೆ ನೀರು ಸಂಪೂರ್ಣವಾಗಿ ಆರಿದ ಮೇಲೆ ಉಗುರು ಬೆಚ್ಚಗಿರುವ ಸಮಯದಲ್ಲಿ ಮಾತ್ರ ಜೇನು ತುಪ್ಪವನ್ನು ಬೆರೆಸಿ ಸೇವನೆ ಮಾಡಬೇಕು.

ಈಗಲೂ ಸಹ ಬಹಳಷ್ಟು ಆಧುನಿಕ ಅಡುಗೆ ಶೈಲಿಯಲ್ಲಿ ಜೇನು ತುಪ್ಪದ ಜೊತೆ ಬೆಣ್ಣೆ ಅಥವಾ ಸಾಧಾರಣ ಹಸುವಿನ ತುಪ್ಪವನ್ನು ಬಳಕೆ ಮಾಡಿ ಆಹಾರ ಪದಾರ್ಥಗಳನ್ನು ತಯಾರು ಮಾಡುತ್ತಾರೆ.