ಮಸಾಲ ಗೋಡಂಬಿ ಮಾಡುವ ಸುಲಭ ವಿಧಾನ

ಗೋಡಂಬಿ ಹಾಗೆಯೇ ತಿನ್ನಲು ಇಷ್ಟವಿಲ್ಲದೇ ಇದ್ದರೆ ಅದಕ್ಕೆ ಕೊಂಚ ಮಸಾಲೆ ಸೇರಿಸಿದರೆ ಇನ್ನಷ್ಟು ರುಚಿಕರವಾಗುತ್ತದೆ. ಹಾಗಿದ್ದರೆ ಸುಲಭವಾಗಿ ಮಸಾಲ ಗೋಡಂಬಿ ಮಾಡುವುದು ಅದಕ್ಕೆ ಏನೆಲ್ಲಾ ಹಾಕಬೇಕು ಇಲ್ಲಿ ನೋಡಿ.

Photo Credit: Instagram

ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಇಂಗು, ಆಮ್ ಚೂರ್ ಮತ್ತು ಉಪ್ಪು ತೆಗೆದುಕೊಳ್ಳಿ

ಇವಿಷ್ಟನ್ನೂ ಚೆನ್ನಾಗಿ ತಿರುವಿ ಮಿಕ್ಸ್ ಮಾಡಿಕೊಂಡು ಬದಿಗಿಟ್ಟುಕೊಳ್ಳಿ

ಈಗ ಒಂದು ಬಾಣಲೆಯಲ್ಲಿ ಇಡೀ ಗೋಡಂಬಿಯನ್ನು ಕೊಂಚ ಬಣ್ಣ ಮಾಸುವವರೆಗೆ ಹುರಿದುಕೊಳ್ಳಿ

ಇದಕ್ಕೆ ಸ್ವಲ್ಪ ಅಚ್ಚ ಖಾರದಪುಡಿ ಹಾಕಿ ಮಿಕ್ಸ್ ಆಗುವಂತೆ ಚೆನ್ನಾಗಿ ತಿರುವಿಕೊಳ್ಳಿ

ನಂತರ ಈಗಾಗಲೇ ಮಾಡಿಟ್ಟಿರುವ ಮಸಾಲ ಮಿಶ್ರಣವನ್ನು ಸೇರಿಸಿಕೊಂಡು ಮಿಕ್ಸ್ ಮಾಡಿ

ಈಗ ಸ್ಟವ್ ಆಫ್ ಮಾಡಿಕೊಂಡು ಎಲ್ಲವೂ ಮಿಕ್ಸ್ ಆಗುವಂತೆ ತೊಳೆಸಿಕೊಳ್ಳಿ

ಬಳಿಕ ಇದಕ್ಕೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿಕೊಂಡು ತಿರುವಿ ಆರಲು ಬಿಟ್ಟರೆ ಮಸಾಲ ಗೋಡಂಬಿ ರೆಡಿ