ಹೋಟೆಲ್ ಶೈಲಿಯಲ್ಲಿ ಕ್ಯಾರೆಟ್, ಬೀನ್ಸ್ ಪಲ್ಯ

ಕ್ಯಾರೆಟ್ ಮತ್ತು ಬೀನ್ಸ್ ಒಳ್ಳೆಯ ಕಾಂಬಿನೇಷನ್ ತರಕಾರಿಗಳು. ಇವೆರಡನ್ನು ಬಳಸಿ ಮಾಡುವ ಪಲ್ಯ ಊಟಕ್ಕೆ ಮಾತ್ರವಲ್ಲ, ಚಪಾತಿಗೂ ರುಚಿಕರವಾಗಿರುತ್ತದೆ. ಹಾಗಿದ್ದರೆ ಹೋಟೆಲ್ ಶೈಲಿಯಲ್ಲಿ ಬೀನ್ಸ್ ಮತ್ತು ಕ್ಯಾರೆಟ್ ಪಲ್ಯ ಮಾಡುವುದು ಹೇಗೆ ನೋಡಿ.

Photo Credit: Instagram

ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದಾಗ ಸಾಸಿವೆ, ಉದ್ದಿನ ಬೇಳೆ, ಕಡ್ಲೆಬೇಳೆ, ಕೆಂಪು ಮೆಣಸಿನ ಒಗ್ಗರಣೆ ಕೊಡಿ

ಈಗ ಇದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡಿರುವ ಬೀನ್ಸ್, ಕ್ಯಾರೆಟ್ ಹಾಕಿ ಒಂದು ನಿಮಿಷ ಪ್ರೈ ಮಾಡಿ

ಬಳಿಕ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ

ಇದು ಚೆನ್ನಾಗಿ ಫ್ರೈ ಆದ ಬಳಿಕ ಕಾಲು ಕಪ್ ನೀರು ಹಾಕಿ ಮೃದುವಾಗುವ ತನಕ ಬೇಯಿಸಿ

ಮಿಕ್ಸಿ ಜಾರ್ ಗೆ ಕಾಯಿತುರಿ, ಈರುಳ್ಳಿ, ಹಸಿಮೆಣಸು, ಜೀರಿಗೆ, ಕರಿಬೇವು ಹಾಕಿ ರುಬ್ಬಿಕೊಳ್ಳಿ

ಈಗ ಬಾಣಲೆಯಲ್ಲಿರುವ ತರಕಾರಿ ಬೆಂದಿದ್ದರೆ ಅದಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಿ

ಈಗ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ನೀರಿನಂಶವೆಲ್ಲಾ ಹೋಗುವ ತನಕ ಬೇಯಿಸಿದರೆ ಪಲ್ಯ ರೆಡಿ