ಖಾಲಿ ಹೊಟ್ಟೆಯಲ್ಲಿ ಎಷ್ಟು ಪ್ರಮಾಣದಲ್ಲಿ ಬೆಳ್ಳುಳ್ಳಿ ಸೇವಿಸಬೇಕು?

ನಿಮ್ಮ ದೈನಂದಿನ ಆಹಾರ ಅಗತ್ಯತೆಗೆ ಅನುಗುಣವಾಗಿ ಬೆಳ್ಳುಳ್ಳಿ ಸೇವಿಸಬಹುದು. ಹಸಿ ಯಾಗಿದ್ದರೆ ಆಗ ನೀವು ಒಂದೆರಡು ಎಸಲು ತಿನ್ನಬಹುದು. ಆದರೆ ಬೇಯಿಸಿದರೆ ನೀವು ನಾಲ್ಕು ಎಸಲು ತಿನ್ನಬೇಕು. ನಿಮ್ಮ ಆಹಾರ ಕ್ರಮದಲ್ಲಿ ಕೇವಲ ಬೆಳ್ಳುಳ್ಳಿ ಮಾತ್ರ ಇರಬಾರದು. ಇದು ಹಲವಾರು ಲಾಭಗಳನ್ನು ನೀಡುವುದು ಎನ್ನುವುದು ನಿಜ. ಆದರೆ ಸಮತೋಲಿತ ಪೋಷಕಾಂಶಗಳಿರುವ ಆಹಾರ ಸೇವನೆ ಮಾಡಿದರೆ ಆಗ ತುಂಬಾ ಒಳ್ಳೆಯದು.

photo credit social media

ನಿಮ್ಮ ಆಹಾರ ಕ್ರಮದಲ್ಲಿ ಬೆಳ್ಳುಳ್ಳಿ ಸೇರಿಸಿಕೊಳ್ಳುವ ಮೊದಲು ನೀವು ವೈದ್ಯರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆಯಿರಿ. ಯಾವುದೇ ಔಷಧಿಗೆ ಬೆಳ್ಳುಳ್ಳಿಯು ಪರ್ಯಾಯವಲ್ಲ. ನೀವು ಔಷಧಿ ಸೇವನೆ ಮಾಡುತ್ತಲಿದ್ದರೆ ಆಗ ನೀವು ವೈದ್ಯರ ಸಲಹೆ ಪಾಲಿಸಿಕೊಂಡು ಹೋಗಿ. ಬೆಳ್ಳುಳ್ಳಿಯು ಔಷಧಿಯ ಕ್ರಿಯೆ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸಲು ನಿಮಗೆ ನೆರವಾಗುವುದು.

ಇಂದಿನ ಯುವಜನರು ಫಿಜ್ಜಾ, ಬರ್ಗರ್ ಎಂದು ಸಿಕ್ಕಿದೆಲ್ಲವನ್ನೂ ತಿಂದು ಯಾವುದೇ ದೈಹಿಕ ಚಟುವಟಿಕೆಗಳನ್ನು ನಡೆಸದೆ ಇರುವ ಪರಿಣಾಮವಾಗಿ ಅನಾರೋಗ್ಯವು ಬೆನ್ನತ್ತಿ ಬರುತ್ತಿದೆ. ಹೀಗಾಗಿ ನಾವು ನಮ್ಮ ಹಿರಿಯರಂತೆ ದೈಹಿಕವಾಗಿ ಫಿಟ್ ಆಗಿರಲು ತುಂಬಾ ಕಷ್ಟಬೇಕಾಗುತ್ತದೆ. ಪ್ರತಿನಿತ್ಯವು ನಾವು ಅಡುಗೆಯಲ್ಲಿ ಬಳಸುವಂತಹ ಸಾಂಬಾರ ಪದಾರ್ಥದಲ್ಲಿ ಬೆಳ್ಳುಳ್ಳಿ ಕೂಡ ಒಂದಾಗಿದೆ.

ಇದು ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಿಂದ ಲಾಭ ನೀಡುವುದು. ಇದರಲ್ಲಿ ಹಲವಾರು ಖನಿಜಾಂಶಗಳು, ವಿಟಮಿನ್ ಗಳು ಮತ್ತು ಪ್ರತಿರೋಧಕ ಶಕ್ತಿ ವೃದ್ಧಿಸುವಂತಹ ಗುಣಗಳು ಇವೆ. ನೀವು ಬೆಳ್ಳುಳ್ಳಿಯನ್ನು ಯಾವ ರೀತಿ ಸೇವಿಸುತ್ತೀರಿ ಎನ್ನುವುದರ ಮೇಲೆ ಜೀವನವು ಬದಲಾಗಬಹುದು.

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಒಳ್ಳೆಯದೇ ಎಂದು ಪ್ರಶ್ನಿಸಿದರೆ, ಖಂಡಿತವಾಗಿಯೂ ಹೌದು. ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಆರೋಗ್ಯ ಮತ್ತು ಸಾಮಾನ್ಯ ಜೀವನದ ಮೇಲೆ ಆಗುವುದು. ಆ ಲಾಭಗಳು ಯಾವುದು ಎಂದು ತಿಳಿಯುವ.

ದೇಹದಲ್ಲಿ ಬೊಜ್ಜು ಆವರಿಸಿಕೊಂಡು, ಅನಾರೋಗ್ಯಕಾರಿ ಆಗಿ ತೂಕ ಬೆಳೆದಿದ್ದರೆ ಆಗ ಅದನ್ನು ಇಳಿಸಲು ಹಸಿ ಬೆಳ್ಳುಳ್ಳಿ ಸೇವಿಸಿ. ಹಸಿ ಬೆಳ್ಳಿಯಲ್ಲಿ ಕೆಟ್ಟ ಮತ್ತು ಅಧಿಕ ಕೊಬ್ಬನ್ನು ಕರಗಿಸುವಂತಹ ಅಂಶಗಳು ಇವೆ. ವಿವಿಧ ರೀತಿಯ ಅಧ್ಯಯನಗಳ ಪ್ರಕಾರ ಬೆಳ್ಳುಳ್ಳಿಯು ಚಯಾಪಚಯ ಕ್ರಿಯೆ ವೃದ್ಧಿಸುವುದು ಎಂದು ಕಂಡುಕೊಳ್ಳಲಾಗಿದೆ.

ಮಧುಮೇಹಿಗಳಿಗೆ ಬೆಳ್ಳುಳ್ಳಿಯು ತುಂಬಾ ಪ್ರಯೋಜನಕಾರಿ. ಇದರಲ್ಲಿ ಇರುವಂತಹ ಅಲಿಸಿನ್ ಎನ್ನುವ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಮತ್ತು ತಗ್ಗಿಸುವುದು. ಬೆಳ್ಳುಳ್ಳಿಯನ್ನು ಜಜ್ಜಿಕೊಂಡಾಗ ಅಥವಾ ಕತ್ತರಿಸಿದಾಗ ಅಲಿಸಿನ್ ಹೆಚ್ಚಾಗುವುದು. ಜಜ್ಜಿಕೊಂಡ ಬೆಳ್ಳುಳ್ಳಿಯನ್ನು ದಿನದಲ್ಲಿ ಎರಡು ಸಲ ಸೇವಿಸಿದರೆ, ಆಗ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು.

ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬೆಳ್ಳುಳ್ಳಿ ತುಂಬಾ ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಸೇವಿಸಿದರೆ ಆಗ ಅದು ನೈಸರ್ಗಿಕವಾಗಿ ಮನಸ್ಥಿತಿ ಸುಧಾರಣೆ ಮಾಡುವುದು. ದೇಹದಲ್ಲಿನ ರಾಸಾಯನಿಕಗಳನ್ನು ಇದು ಸಮತೋಲನದಲ್ಲಿ ಇಡುವುದು ಮತ್ತು ಮೆದುಳಿನ ರಾಸಾಯನಿಕಗಳನ್ನು ಕೂಡ. ಖಿನ್ನತೆಯು ಮೆದುಳಿನ ರಾಸಾಯನಿಕದ ಅಸಮತೋಲನದಿಂದ ಬರುವುದು ಮತ್ತು ಬೆಳ್ಳುಳ್ಳಿಯು ಖಿನ್ನತೆ ವಿರುದ್ಧ ಹೋರಾಡಲು ನೆರವಾಗವುದು.