ಒಂದು ಲೋಟ ಟೀಗೆ ಎಷ್ಟು ಸಕ್ಕರೆ ಹಾಕಿದರೆ ಆರೋಗ್ಯಕರ

ಚಹಾ ಸೇವನೆ ಮಾಡುವಾಗ ಅದಕ್ಕೆ ಎರಡು ಮೂರು ಸ್ಪೂನ್ ಸಕ್ಕರೆ ಹಾಕಿಕೊಂಡು ಸ್ವೀಟ್ ಆಗಿ ಸೇವನೆ ಮಾಡಲು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಆದರೆ ಒಂದು ಕಪ್ ಚಹಾಕ್ಕೆ ಎಷ್ಟು ಸಕ್ಕರೆ ಹಾಕಿದರೆ ಆರೋಗ್ಯಕರ ನೋಡಿ.

Photo Credit: Instagram, WD

ಕೆಲವರಿಗೆ ಒಂದು ಕಪ್ ಚಹಾಗೆ ಎರಡರಿಂದ ಮೂರು ಸ್ಪೂನ್ ಸಕ್ಕರೆ ಹಾಕುವ ಅಭ್ಯಾಸವಿರುತ್ತದೆ

ಸಕ್ಕರೆ ಹಾಕಿದ ಚಹಾಕ್ಕಿಂತ ಸಕ್ಕರೆ ಹಾಕದ ಚಹಾವೇ ಹೆಚ್ಚು ಆರೋಗ್ಯಕರವಾಗಿದೆ

ಅದರಲ್ಲೂ ಬ್ಲ್ಯಾಕ್ ಟೀ ಸೇವನೆಯಂತೂ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ

ಒಂದು ವೇಳೆ ಸಕ್ಕರೆ ಹಾಕಬೇಕೆಂದರೆ ಒಂದು ಕಪ್ ಗೆ ಒಂದು ಸ್ಪೂನ್ ಗಿಂತ ಹೆಚ್ಚು ಸಕ್ಕರೆ ಬೇಡ

ಹೆಚ್ಚು ಸಕ್ಕರೆ ಹಾಕಿದ ಚಹಾ ಸೇವಿಸುವುದರಿಂದ ತೂಕ ಹೆಚ್ಚಳವಾಗುವ ಸಾಧ್ಯತೆಯಿದೆ

ಹೆಚ್ಚು ಸಕ್ಕರೆ ಬಳಸಿದ ಚಹಾ ಸೇವನೆಯಿಂದ ಹಲ್ಲುಗಳು ಬೇಗನೇ ಹುಳುಕಾಗಬಹುದು

ಹೆಚ್ಚು ಸಕ್ಕರೆ ಬಳಸಿದರೆ ಸಸ್ತು, ಮೂಡ್ ಸ್ವಿಂಗ್ಸ್ ಮುಂತಾದ ಸಮಸ್ಯೆ ಬರಬಹುದು