ಹೊಸ ಚಪ್ಪಲಿ ಗಾಯ ಮಾಡುತ್ತಿದ್ದರೆ ಮನೆ ಮದ್ದು

ಹೊಸದಾಗಿ ಖರೀದಿಸಿದ ಚಪ್ಪಲಿ ಎರಡು ಮೂರು ದಿನಗಳವರೆಗೆ ಹಾಕಿಕೊಂಡಾಗ ಕಾಲಿನಲ್ಲಿ ಗುಳ್ಳೆ, ಗಾಯವಾಗುವುದು ಸಹಜ. ಹೀಗಾಗದಂತೆ ಮಾಡಲು ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: Instagram

ಹೊಸ ಚಪ್ಪಲಿ ಕಾಲಿಗೆ ಹಾಕಿಕೊಳ್ಳುವ ಮೊದಲು ಪಾದಗಳಿಗೆ ಕೊಂಚ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ

ಚಪ್ಪಲಿಯಿಂದ ಗುಳ್ಳೆಗಾಗಿರುವ ಜಾಗಕ್ಕೆ ಕೊಂಚ ಐಸ್ ಕ್ಯೂಬ್ ಇಟ್ಟು ಮಸಾಜ್ ಮಾಡಿ

ಚಪ್ಪಲಿ ಹಾಕಿಕೊಳ್ಳುವ ಮೊದಲು ಕಾಲಿಗೆ ಅಲ್ಯುವೀರಾ ಜೆಲ್ ಹಚ್ಚಿಕೊಳ್ಳಿ

ಕಾಲಿಗೆ ವ್ಯಾಸ್ಲೀನ್ ಹಚ್ಚಿ ಬಳಿಕ ಚಪ್ಪಲಿ ಹಾಕಿಕೊಂಡರೆ ಕಡಿಯದು

ಸಾಧ್ಯವಾದರೆ ಕಾಲಿಗೆ ಸಾಕ್ಸ್ ಧರಿಸಿ ಕೆಲವು ದಿನ ಚಪ್ಪಲಿ ಹಾಕಿ ನಂತರ ಸಾಕ್ಸ್ ಇಲ್ಲದೇ ಬಳಸಬಹುದು

ಚಪ್ಪಲಿ ಹಾಕುವ ಮೊದಲು ಒಮ್ಮೆ ಬಿಸಿ ನೀರಿನಲ್ಲಿ ತೊಳೆದು ಆ ಬಳಿಕ ಬಳಕೆ ಮಾಡಿ

ಆದಷ್ಟು ಮೃದುವಾಗಿರುವ ಚಪ್ಪಲಿಯನ್ನೇ ಖರೀದಿ ಮಾಡಿದರೆ ಕಡಿಯುವುದು ತಪ್ಪುತ್ತದೆ