ರಾಸಾಯನಿಕಯುಕ್ತ ಕಲ್ಲಂಗಡಿ ಹಣ್ಣು ಪರೀಕ್ಷೆಗೆ ಟಿಪ್ಸ್

ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಹಣ್ಣುಗಳೂ ಆರೋಗ್ಯಕರವಾಗಿರುವುದಿಲ್ಲ. ವ್ಯಾವಹಾರಿಕ ಉದ್ದೇಶದಿಂದ ಅದಕ್ಕೆ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ಈಗ ಕಲ್ಲಂಗಡಿ ಹಣ್ಣು ರಾಸಾಯನಿಕಯುಕ್ತವೇ ಎಂದು ಪರೀಕ್ಷಿಸುವುದು ಹೇಗೆ ನೋಡಿ.

credit: social media

ಕಲ್ಲಂಗಡಿ ಹಣ್ಣು ಕೃತಕವಾಗಿ ಮಾಗಲು ಅದಕ್ಕೆ ರಾಸಾಯನಿಕ ಔಷಧಗಳಿರುವ ಇಂಜಕ್ಷನ್ ನೀಡಲಾಗುತ್ತದೆ.

ಕಲ್ಲಂಗಡಿ ಹಣ್ಣು ಖರೀದಿಸುವಾಗ ಸೂಕ್ಷ್ಮವಾಗಿ ಮೇಲ್ಮೈ ಗಮನಿಸಿ ಇಂಜಕ್ಷನ್ ಮಾರ್ಕ್ ಗಳಿವೆಯೇ ಎಂದು ಪರೀಕ್ಷಿಸಿ

ಕಲ್ಲಂಗಡಿ ಹಣ್ಣು ನೈಸರ್ಗಿಕವಾಗಿ ಹಣ್ಣಾಗಿದ್ದರೆ ಅದರ ಮೇಲ್ಮೈ ಕೊಂಚ ಹಳದಿಯುಕ್ತವಾಗಿರಬೇಕು.

ಕಲ್ಲಂಗಡಿ ಹಣ್ಣಿನ ಹೊರಗೆ ಬಿಳಿ ಬಣ್ಣದ ಪರದೆಯಿದ್ದರೆ ಅದು ಕೃತಕವಾಗಿ ಹಣ್ಣು ಮಾಡಲಾಗಿದೆ ಎಂದು ಅರ್ಥ

ಕಲ್ಲಂಗಡಿ ಹಣ್ಣಿನ ತೊಟ್ಟನ್ನು ಗಮನಿಸಿ ಅದು ಒಣಗಿದ್ದರೆ ಅದು ನೈಸರ್ಗಿಕವಾಗಿ ಹಣ್ಣಾಗಿದೆ ಎಂದರ್ಥ

ಟಿಶ್ಯೂ ಪೇಪರ್ ಬಳಸಿ ಕಲ್ಲಂಗಡಿ ಹಣ್ಣನ್ನು ಉಜ್ಜಿದಾಗ ಅದು ಕೆಂಪು ಬಣ್ಣಕ್ಕೆ ತಿರುಗಿದರೆ ಕೃತಕವೆಂದರ್ಥ

ನೆನಪಿರಲಿ, ಕಲ್ಲಂಗಡಿ ಹಣ್ಣು ಬಳಸುವ ಮುನ್ನ ಅದರ ಹೊರಾವರಣವನ್ನೂ ಉಪ್ಪು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ