ಗ್ಯಾಸ್ ಬರ್ನರ್ ಕಪ್ಪಾಗಿದ್ದರೆ ಸುಲಭವಾಗಿ ಕ್ಲೀನ್ ಮಾಡಬಹುದು

ದಿನನಿತ್ಯವೂ ಬಳಸುವ ಗ್ಯಾಸ್ ಸ್ಟವ್ ಬರ್ನರ್ ಕಪ್ಪಾಗುವುದು ಸಹಜ. ಇದನ್ನು ಕ್ಲೀನ್ ಮಾಡಿ ಮೊದಲಿನಂತೆ ಹೊಂಬಣ್ಣ ಬರುವಂತೆ ಮಾಡುವುದು ಹೇಗೆ ಇಲ್ಲಿದೆ ನೋಡಿ ಉಪಾಯ.

Photo Credit: Instagram

ಗ್ಯಾಸ್ ಬರ್ನರ್ ಮೇಲೆ ಸ್ವಲ್ಪ ಬೇಕಿಂಗ್ ಸೋಡಾ ಅಥವಾ ಇನೋ ಪೌಡರ್ ಸಿಂಪಡಿಸಿ

ಇದಕ್ಕೆ ನಿಂಬೆ ರಸವನ್ನೂ ಚೆನ್ನಾಗಿ ಒದ್ದೆಯಾಗುವಂತೆ ಹಾಕಿ

ಬಳಿಕ ಹದ ಬಿಸಿನೀರು ಹಾಕಿದ ಬೌಲ್ ನಲ್ಲಿ ಬರ್ನರ್ ಹಾಕಿಡಿ

ಇದಕ್ಕೆ ಸ್ವಲ್ಪ ವಿನೇಗರ್ ನ್ನೂ ಸೇರಿಸಿಕೊಂಡು ಎರಡು ಗಂಟೆ ನೆನೆಯಲು ಬಿಡಿ

ಬಳಿಕ ಹೊರತೆಗೆದು ನಿಂಬೆ ಹೋಳಿನಿಂದ ಚೆನ್ನಾಗಿ ಉಜ್ಜಿಕೊಳ್ಳಿ

ಬಳಿಕ ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ

ಹೀಗೆ ಮಾಡುವುದರಿಂದ ಬರ್ನರ್ ಮೊದಲಿನಂತೆ ಹೊಂಬಣ್ಣ ಬರುವುದು