ಕನ್ನಡಿ ಹೊಸದರಂತೆ ಹೊಳೆಯಬೇಕಾದರೆ ಹೀಗೆ ಮಾಡಿ

ಮನೆಯಲ್ಲಿ ಎಲ್ಲರೂ ಬಳಸುವ ಕನ್ನಡಿ ಕೆಲವೊಮ್ಮೆ ಕೈ ತಾಕಿಯೋ, ಇನ್ನೇನೋ ಕಾರಣಗಳಿಂದ ಕಲೆಯಾಗಿಬಿಡುತ್ತದೆ. ಇದನ್ನು ಸಾಮಾನ್ಯ ನೀರಿನಿಂದ ಉಜ್ಜಲು ಹೋದರೆ ಮತ್ತೆ ಕೊಳೆಯಾಗಬಹುದು. ಹೀಗಾಗಿ ಕನ್ನಡಿ ಕ್ಲೀನ್ ಮಾಡಲು ಈ ಟ್ರಿಕ್ಸ್ ಬಳಸಿ.

Photo Credit: Instagram, WD

ಕನ್ನಡಿ ಕೊಳೆಯಾಗಿದ್ದಾಗ ಕೇವಲ ಬಟ್ಟೆಯಿಂದ ಒರೆಸಿದರೂ ಕೆಲವೊಮ್ಮೆ ಕಲೆ ಹೋಗುವುದಿಲ್ಲ.

ಅದಕ್ಕಾಗಿ ವಿನೇಗರ್ ಮತ್ತು ಬೇಕಿಂಗ್ ಸೋಡಾ ಬೆರೆಸಿ ಒಂದು ಪೇಸ್ಟ್ ರೆಡಿ ಮಾಡಿ

ಕನ್ನಡಿಯಲ್ಲಿ ಕಲೆ, ಕಪ್ಪಾಗಿರುವ ಜಾಗಕ್ಕೆ ಈ ಪೇಸ್ಟ್ ಹಚ್ಚಿ ಕೆಲವು ಸಮಯ ಬಿಡಿ

ಬಳಿಕ ಒಂದು ಶುದ್ಧ ಬಟ್ಟೆಯನ್ನು ಒದ್ದೆ ಮಾಡಿ ಕಲೆಯಾಗದಂತೆ ಒರೆಸಿಕೊಳ್ಳಿ

ಇಲ್ಲವೇ ತಲೆ ಸ್ನಾನ ಮಾಡಲು ಬಳಸುವ ಶ್ಯಾಂಪೂ ಬಳಸಿಯೂ ಕನ್ನಡಿ ತೊಳೆಯಬಹುದು

ಅಥವಾ ಕೇವಲ ವಿನೇಗರ್ ದ್ರಾವಣ ಮಾಡಿ ಅದರಿಂದಲೂ ಕನ್ನಡಿ ತೊಳೆದುಕೊಳ್ಳಬಹುದು.

ಲ್ಯಾಪ್ ಟಾಪ್, ಮೊಬೈಲ್ ಡಿಸ್ ಪ್ಲೇ ಒರೆಸಲು ಬಳಸುವ ದ್ರಾವಣದಿಂದಲೂ ಕ್ಲೀನ್ ಮಾಡಬಹುದು