ಬಿಳಿ ಬಟ್ಟೆಗೆ ಕಲೆಯಾಗಿದ್ದರೆ ಹೀಗೆ ಮಾಡಿ

ಸಾಮಾನ್ಯವಾಗಿ ಬಿಳಿ ಬಟ್ಟೆ ತೊಟ್ಟುಕೊಂಡಾಗ ಕಲೆಯಾದರೆ ಬೇಗನೇ ಹೋಗುವುದಿಲ್ಲ. ಬಿಳಿ ಬಟ್ಟೆಯಿಂದ ಕಲೆ ತೆಗೆಯಲು ಈ ಟಿಪ್ಸ್ ಗಳನ್ನು ಫಾಲೋ ಮಾಡಿ.

Photo Credit: Instagram

ಕಲೆಯನ್ನು ಹೆಚ್ಚು ಹೊತ್ತು ಉಳಿಸಿಕೊಂಡಷ್ಟು ತೆಗೆಯಲು ಕಷ್ಟವಾಗುತ್ತದೆ

ಕಾಫಿ, ಟೀಯಂತಹ ಕಲೆಯಾದರೆ ತಕ್ಷಣವೇ ಸೋಪ್ ನೀರಿನಲ್ಲಿ ಬಟ್ಟೆಯನ್ನು ನೆನೆ ಹಾಕಬೇಕು

ಕಲೆಯಾದ ಭಾಗವನ್ನು ಸ್ಪೂನ್ ನಿಂದ ಒರೆಸಿ ಅಂಟು ತೆಗೆಯಲು ಪ್ರಯತ್ನಿಸಿ

ಕಲೆಯಾದ ಭಾಗಕ್ಕೆ ಕೊಂಚ ವಿನೇಗರ್ ಹಾಕಿ ಕೆಲವು ಹೊತ್ತು ಇಟ್ಟು ನಂತರ ವಾಷ್ ಮಾಡಿ

ಬೇಕಿಂಗ್ ಸೋಡಾ ಪೇಸ್ಟ್ ಮಾಡಿ ಕಲೆಯಾದ ಜಾಗಕ್ಕೆ ಹಚ್ಚಿ ಬಳಿಕ ತೊಳೆಯಿರಿ

ಬಿಳಿ ಬಟ್ಟೆಯಲ್ಲಿ ಕಲೆ ಹರಡದಂತೆ ಆ ಜಾಗಕ್ಕೆ ಮಾತ್ರ ನಿಂಬೆರಸ ಹಾಕಿ ತಿಕ್ಕಿ ತೊಳೆಯಿರಿ

ಕಲೆಯಾದ ಜಾಗಕ್ಕೆ ಬಿಸಿ ನೀರು ಹಾಕಿ ಡಿಶ್ ವಾಶ್ ನಿಂದ ಚೆನ್ನಾಗಿ ತಿಕ್ಕಿ ತೊಳೆದರೆ ಕಲೆ ಹೋಗುತ್ತದೆ